ಮಕ್ಕಳು ಮಣ್ಣು ತಿನ್ನುವುದು ಸಾಮಾನ್ಯ. ಶೇಕಡಾ 20 ರಷ್ಟು ಮಕ್ಕಳು ಮಣ್ಣು ತಿನ್ನುತ್ತಾರೆ. ಕೇವಲ ಮಣ್ಣಷ್ಟೇ ಅಲ್ಲದೆ ಗೋಡೆಯ ಸುಣ್ಣ, ಕಡ್ಡಿ, ಪೇಸ್ಟ್ ತಿನ್ನುವ ಮಕ್ಕಳಿದ್ದಾರೆ. ಮಕ್ಕಳು ಮಾತ್ರವಲ್ಲ, ಕೆಲ ದೊಡ್ಡವರಿಗೂ ಇಂಥ ಅಭ್ಯಾಸವಿರುತ್ತದೆ.
ಅಮೆರಿಕಾದ ಮಿಶಿಗನ್ ನಲ್ಲಿರುವ ಒಬ್ಬ ಮಹಿಳೆ ತನ್ನ ಈ ವಿಚಿತ್ರ ಅಭ್ಯಾಸದ ಬಗ್ಗೆ ಟಿವಿಯಲ್ಲಿ ಹೇಳಿಕೊಂಡಿದ್ದಾಳೆ. ಈಕೆಗೆ ಗೋಡೆಯ ತುಂಡುಗಳನ್ನು ತಿನ್ನೋದು ಇಷ್ಟವಂತೆ. ನಿಕೋಲ್ ಹೆಸರಿನ ಈಕೆ ಈಗಾಗಲೇ ತನ್ನ ಮನೆಯ ಗೋಡೆಗಳ ಕೆಲ ಭಾಗಗಳನ್ನು ತಿಂದಿದ್ದಾಳೆ.
ನಿಕೋಲ್ ಹೇಳುವ ಪ್ರಕಾರ, ಐದು ವರ್ಷದ ಹಿಂದೆ ಸುಣ್ಣವನ್ನು ತಿನ್ನುವ ಅಭ್ಯಾಸ ಶುರುವಾಯಿತಂತೆ. ತನ್ನ ತಾಯಿಯ ಮರಣದ ನಂತರ ಗೋಡೆಯನ್ನು ಕಿತ್ತು ಸುಣ್ಣವನ್ನು ತಿನ್ನಲು ಪ್ರಾರಂಭಿಸಿದ್ದಳಂತೆ. ಈ ಅಭ್ಯಾಸ ನಂತರ ಚಟವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಅವಳು ಮನೆಯ ಗೋಡೆಯಲ್ಲಿರುವ ಸುಣ್ಣ ತಿನ್ನಲು ಪ್ರಾರಂಭಿಸಿದ್ದಾಳೆ. ಇಂದು ತನ್ನ ಮನೆಯ ಗೋಡೆಯಿಂದ ಸುಣ್ಣವನ್ನು ಕೆರೆದು ದಿನಕ್ಕೆ 6 ಬಾರಿ ತಿನ್ನುತ್ತೇನೆಂದು ಆಕೆ ಹೇಳಿದ್ದಾಳೆ.
ಒಂದು ವಾರದಲ್ಲಿ 3.2 ಚದರ ಅಡಿ ಗೋಡೆಯನ್ನು ತಿನ್ನುವ ಈಕೆಗೆ ಒಣಗಿದ ಗೋಡೆಗಳ ವಾಸನೆ ಇಷ್ಟವಂತೆ.