alex Certify ಹೂಡಿಕೆ ನೆಪದಲ್ಲಿ ಅತ್ಯಾಚಾರ, 11 ಲಕ್ಷ ರೂ. ಪಡೆದು ವಂಚನೆ: ಮಹಿಳೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಡಿಕೆ ನೆಪದಲ್ಲಿ ಅತ್ಯಾಚಾರ, 11 ಲಕ್ಷ ರೂ. ಪಡೆದು ವಂಚನೆ: ಮಹಿಳೆ ದೂರು

ಪುಣೆ: ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. 11 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಿಂಗಾಪುರದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ಆರೋಪಿ ನರ್ಸಿಂಗ್ ಕೋರ್ಸ್ ಮಾಡುವ ನೆಪದಲ್ಲಿ ಹಲವಾರು ಬಾರಿ ತನ್ನಿಂದ ಹಣ ಪಡೆದುಕೊಂಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.

ಆರೋಪಿಯನ್ನು ರೋನಿತ್ ಡಿ ಕಪೂರ್ ಅಲಿಯಾಸ್ ಸಂದೀಪ್ ದಾದಾರಾವ್ ವೈಭಿಸೆ ಎಂದು ಗುರುತಿಸಲಾಗಿದೆ. ವಡ್ಗಾಂಶೇರಿ ನಿವಾಸಿಯಾಗಿರುವ ಆರೋಪಿ 2020ರ ಡಿಸೆಂಬರ್ ನಿಂದ 2021 ಜನವರಿವರೆಗಿನ ಅವಧಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮಹಿಳೆಯರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಹಣ ಪಡೆದಿದ್ದಾನೆ. ಆಕೆಯನ್ನು ಬ್ಲಾಕ್ಮೇಲ್ ಮಾಡಿದ್ದಾನೆ. ಹಣ ವಾಪಸ್ ಮಾಡಲು ನಿರಾಕರಿಸಿದ ಆರೋಪಿ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಿಕೊಂಡಿರುವ ಹಿಂಜೇವಾಡಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪಿ. ಬೋರ್ಕರ್ ಅವರು ಪ್ರಕರಣದ ತನಿಖೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...