ಪೇನ್ ಕಿಲ್ಲರ್ ಮಾತ್ರೆ ಎಂದು ಭಾವಿಸಿ ಏರ್‌ಪಾಡ್ ಒಂದನ್ನು ಅಕಸ್ಮಾತ್ ಆಗಿ ನುಂಗಿಬಿಟ್ಟ ಮಹಿಳೆ ತನ್ನ ಕಥೆಯ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಾರ್ಲಿ ಬಿಯರ್ ಹೆಸರಿನ 27 ವರ್ಷದ ಮಹಿಳೆಗೆ ಈ ಅನುಭವವಾಗಿದೆ.
“ನಾನು ಎಡಬದಿಯ ಏರ್‌ಪಾಡ್ ಅನ್ನು ನುಂಗಿಬಿಟ್ಟೆ. ಅದನ್ನು ಹೊರಗೆ ಕಕ್ಕಲು ಯತ್ನಿಸಿದರೂ ಅದು ಆಚೆ ಬರಲಿಲ್ಲ. ನನ್ನ ನೆಮ್ಮದಿ ಹಾಳಾಗುತ್ತಿದೆ,” ಎಂದು ಕಾರ್ಲಿ ತಿಳಿಸಿದ್ದಾರೆ.
ಇಬುಪ್ರೊಫೇನ್ ನೋವುನಿವಾರಕ ಮಾತ್ರೆ ಎಂದು ತಪ್ಪಾಗಿ ಭಾವಿಸಿ ಏರ್‌ಪಾಡ್ ನುಂಗಿದ್ದಾಗಿ ಇದೇ ಮಹಿಳೆ ಮುಂದಿನ ವಿಡಿಯೋದಲ್ಲಿ ವಿವರಿಸಿದ್ದಾರೆ.
BIG NEWS: ಬಿಡಿಎ ಕಚೇರಿ ಮೇಲೆ ACB ಮುಂದುವರೆದ ಶೋಧ; ಎಸ್.ಆರ್ ವಿಶ್ವನಾಥ್ ಹೇಳಿದ್ದೇನು?
“ನಾನು ಒಂದು ಕೈಯಲ್ಲಿ ಇಬುಪ್ರೊಫೇನ್ ಮಾತ್ರೆ ಹಿಡಿದಿದ್ದೆ. ಅದೇ ಕೈಯಲ್ಲಿ ಒಂದು ಏರ್‌ಪಾಡ್ ಅನ್ನೂ ಹಿಡಿದಿದ್ದೆ. ಇದಾದ ಮೇಲೆ ಇಬುಪ್ರೊಫೇನ್ ಸೇವಿಸಲು ಮುಂದಾಗಿ, ಅದನ್ನು ತೆಗೆದುಕೊಂಡ ಬಳಿಕ, ಓಹ್ ಒಳಗೇನೋ ಗಟ್ಟಿಯಾದ ಪದಾರ್ಥ ಸೇರಿದೆ ಅನಿಸಿ ನೋಡಿದಾಗ ಇಬುಪ್ರೊಫೇನ್ ನನ್ನ ಕೈಯಲ್ಲೇ ಇತ್ತು. ಮುಂದಿನದ್ದೆಲ್ಲಾ ಬ್ಲರ್ ಎನಿಸುತ್ತದೆ ಏಕೆಂದರೆ ಆಗ ನಾನು ಗಾಬರಿಯಾಗಿದ್ದೆ,” ಎಂದು ಈಕೆ ಹೇಳಿಕೊಂಡಿದ್ದಾರೆ.
ಇದಾದ ಬಳಿಕ ವಾಯ್ಸ್ ಮೆಮೋ ರೆಕಾರ್ಡ್ ಮಾಡಲು ಈಕೆ ಮುಂದಾಗಿದ್ದಾರೆ. ಆದರೆ ಆ ವೇಳೆ ಏರ್ ಪಾಡ್ ತನ್ನ ಹೊಟ್ಟೆಯಲ್ಲೇ ಇರುವುದು ತಿಳಿದುಬಂದಿದ್ದು, ವಾಯ್ಸ್ ಮೆಮೋದಲ್ಲಿ ಆಕೆಯ ದನಿಯು ಸ್ವಲ್ಪ ಮಂಕಾದಂತೆ ಕೇಳಿ ಬರುತ್ತಿದೆ. ಹೊಟ್ಟೆಯೊಳಗೆ ಸೇರಿರುವ ಏರ್‌ಪಾಡ್ ಜೊತೆಗೆ ಸಹ ಐಫೋನ್ ತನ್ನಿಂತಾನೇ ಪೇರ್ ಆಗುವ ಕಾರಣ ಆಕೆ ಅದನ್ನು ತನ್ನ ಫೋನ್ ಏರ್‌ಪಾಡ್‌ಅನ್ನು ಫರ್ಗೆಟ್ ಮಾಡುವಂತೆ ಮಾಡಬೇಕಾಗಿ ಬಂದಿದೆ.
ತನ್ನ ಜೀರ್ಣಾಂಗ ವ್ಯೂಹದ ಮೂಲಕ ಏರ್‌ಪಾಡ್ ಹಾದು ಹೋಗಲು ಕಾದ ಈಕೆ, ಬಳಿಕ ಖಾತ್ರಿಗಾಗಿ ಎಕ್ಸ್‌ರೇ ತೆಗೆಸಿ ನೋಡಿದ್ದಾರೆ.