ಸ್ವಾಭಿಮಾನಿ ವೃದ್ಧೆಯೊಬ್ಬರು ತಮ್ಮ ವಯಸ್ಸಿನ ವಿಚಾರ ಪಕ್ಕಕ್ಕಿಟ್ಟು ತರಕಾರಿ ಮಾರಾಟ ಮಾಡಿ ಮನೆ ನಡೆಸುವ ಸಾಹಸ ಕತೆ ಇದು
102 ವರ್ಷದ ತರಕಾರಿ ಮಾರಾಟಗಾರ್ತಿ ಲಕ್ಷ್ಮಿ ಮೈತಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ ಎಂಬಂತೆ ಹುರುಪಿನಿಂದ, ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ. ಕಳೆದ ಐದು ದಶಕಗಳಿಂದ ಅವರ ಕುಟುಂಬದ ಅಗತ್ಯಗಳಿಗೆ ಹಣಕಾಸಿನ ಅಡಚಣೆಯನ್ನು ಎಂದಿಗೂ ಬಾರದಂತೆ ನೋಡಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಜೋಗಿಬರ್ಹ್ ಗ್ರಾಮದ ನಿವಾಸಿಯಾದ ಲಕ್ಷ್ಮಿ ಮೈತಿ ಕೋಲಾಘಾಟ್‌ನಲ್ಲಿ ಮುಂಜಾನೆ ನಾಲ್ಕು ಗಂಟೆಗೆ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಬಳಿಕ ರಿಕ್ಷಾದಲ್ಲಿ ತುಂಬಿಕೊಂಡು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಲು ಹೋಗುತ್ತಾರೆ.
ನನ್ನ ಪತಿ ಸುಮಾರು 48 ವರ್ಷಗಳ ಹಿಂದೆ ಮರಣಹೊಂದಿದ ನಂತರ, ದಿನಗಟ್ಟಲೆ ಆಹಾರವಿಲ್ಲದೆ ಪರದಾಡಬೇಕಾಯಿತು. ಮನೆಯನ್ನು ಮುನ್ನೆಡೆಸಲು ತರಕಾರಿ ಮಾರಾಟಕ್ಕೆ ತೊಡಗಿದೆ. ಆ ಸಮಯದಲ್ಲಿ ನನ್ನ ಮಗನಿಗೆ ಕೇವಲ 16 ವರ್ಷ ಎಂದು ಅವರು ಹೇಳಿಕೊಂಡಿದ್ದಾರೆ.
ಬಸವಣ್ಣವರ ಬಳಿಕ ಅಂಬೇಡ್ಕರ್ ಪಠ್ಯ ವಿವಾದ; ‘ಸಂವಿಧಾನ ಶಿಲ್ಪಿ’ ಕೈಬಿಟ್ಟ ಪರಿಷ್ಕರಣೆ ಸಮಿತಿ
ಲಕ್ಷ್ಮಿ ಮೈತಿ ಕುಟುಂಬದ ಪರಿಸ್ಥಿತಿ ಈಗ ಸುಧಾರಿಸಿದೆ, ಹೆಲ್ಪ್‌ಏಜ್ ಇಂಡಿಯಾ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ವಿಶೇಷ ರೀತಿಯಲ್ಲಿ ನೆರವಾಗಿದೆ. ಶತಾಯುಷಿಯ ಮನೆಯಲ್ಲಿ ಈಗ ಹೊಸ ಪೀಠೋಪಕರಣ ಮತ್ತು ಟಿವಿ ಸಹ ಬಂದಿದೆ
ಎಂಟು ವರ್ಷಗಳ ಹಿಂದೆ ನನ್ನ ಮಗನಿಗೆ ಚಹಾ, ತಿಂಡಿ ವ್ಯಾಪಾರ ಆರಂಭಿಸಲು ಎನ್‌ಜಿಒ 40,000 ರೂ. ಸಾಲವಾಗಿ ನೀಡಿದಾಗ ನಮ್ಮ ಪರಿಸ್ಥಿತಿ ಉತ್ತಮವಾಯಿತು ಎಂದು ಅವರು ವಿವರಿಸಿದ್ದಾರೆ.
ತನ್ನ ತಾಯಿ “ದುರ್ಗಾ ದೇವಿಯ ಅವತಾರ” ಎಂದು ಹೇಳುವ ಆಕೆಯ 64 ವಯಸ್ಸಿನ ಮಗ, ಅವಳು ನನಗೆ ಮಾತ್ರವಲ್ಲ, ನನ್ನ ಮಕ್ಕಳಿಗೂ ಸಹ ಆಹಾರ ನೀಡಿದ್ದಾಳೆ, ಅವಳು ನನ್ನ ಮಗಳ ಮದುವೆಗೆ ಹಣ ವೆಚ್ಚ ಮಾಡಿದಳು, ನಮಗೆ ಸೂರು ನಿರ್ಮಿಸಿ ಸಾಲವನ್ನೂ ತೀರಿಸಿದಳು ಎಂದು ಹೇಳಿದ್ದಾರೆ.
ಬಹುತೇಕ ಸಂದರ್ಭಗಳಲ್ಲಿ ಮಗ ತನ್ನ ವಯಸ್ಸಾದ ತಾಯಿಯನ್ನು ನೋಡಿಕೊಳ್ಳುತ್ತಾನೆ, ಆದರೆ ನನ್ನ ತಾಯಿ ಎಂದಿಗೂ ನನ್ನನ್ನು ಅವಲಂಬಿಸಿಯೇ ಇಲ್ಲ. ಅವಳು ಐರನ್ ಲೇಡಿ ಎಂದು ಪುತ್ರ ಗೌರ್ ತಿಳಿಸಿದರು.
ಆಕೆಯ ಮೊಮ್ಮಗ ಇಪ್ಪತ್ತೆಂಟು ವರ್ಷದ ಸುಬ್ರತಾ, ಅಜ್ಜಿ ಮೊಬೈಲ್ ಕೊಡಿಸಿದ್ದು, ನನ್ನ ತಂದೆ ನನಗೆ ಖರೀದಿಸಿ ಕೊಡಲು ಸಾಧ್ಯವಾಗದ್ದನ್ನು ನನ್ನ ಅಜ್ಜಿ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ನೀವು ನಿವೃತ್ತಿಯಾಗುವ ಯೋಜನೆ ಹೊಂದಿದ್ದೀರಾ ಎಂದು ಮೈತಿಗೆ ಕೇಳಿದಾಗ, ನಾನು ಇನ್ನೂ ಆ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾರೆ.