ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಆಗಿರುವ ಐಪಿಎಲ್‌ನಲ್ಲಿ ಆಡುವುದು ಯಾವುದೇ ದೇಶದ ಕ್ರಿಕೆಟಿಗನಿಗೂ ಕನಸಿನ ವಿಚಾರ. ನ್ಯೂಜಿಲೆಂಡ್ ವೇಗಿ ಕೈಲೆ ಜೇಮಿಸನ್‌ಗೂ ಎಲ್ಲ ಕ್ರಿಕೆಟಿಗರಂತೆ ಐಪಿಎಲ್‌ನಲ್ಲಿ ಆಡುವ ಕನಸು ಬಹಳ ದಿನಗಳಿಂದ ಇತ್ತು.
ದೂರದ ಚೆನ್ನೈನಲ್ಲಿ ಐಪಿಎಲ್ ಹರಾಜು ನಡೆಯುತ್ತಿದ್ದಾಗ ತಮ್ಮೂರು ಕ್ರೈಸ್ಟ್‌ಚರ್ಚ್‌ನಲ್ಲಿ ಕುಳಿತು ರಾತ್ರಿ 10:30 ರ ವೇಳೆ ಟಿವಿಯಲ್ಲಿ ನೋಡುತ್ತಿದ್ದ ಜೇಮಿಸನ್, 15 ಕೋಟಿ ರೂ.ಗಳಿಗೆ ಆರ್‌ಸಿಬಿ ತಂಡವನ್ನು ತಾವು ಸೇರುವ ಸುದ್ದಿಯನ್ನು ಕಣ್ಣಾರೆ ಕಂಡು ಬೆರಗಾಗಿದ್ದಾರೆ. ಡೆಲ್ಲಿ ಹಾಗೂ ಪಂಜಾಬ್ ತಂಡಗಳ ನಡವೆ ತುರುಸಿನ ಪೈಪೋಟಿ ಕಂಡ ತಮ್ಮ ಹರಾಜಿನಲ್ಲಿ ಬೆಂಗಳೂರು 15 ಕೋಟಿ ತೆತ್ತು ಖರೀದಿಸಿದ ಕ್ಷಣವೇ ಜೇಮಿಸನ್ ಮಾಡಿದ ಕೆಲಸವೇನು ಗೊತ್ತೇ? ನ್ಯೂಜಿಲೆಂಡ್ ಕರೆನ್ಸಿಯಲ್ಲಿ 15 ಕೋಟಿ ರೂ.ಗಳಿಗೆ ಎಷ್ಟು ಬೆಲೆ ಸಿಗುತ್ತದೆ ಎಂದು ಚೆಕ್ ಮಾಡಿದ್ದು…!
ʼಮಾಸ್ಕ್ʼ ನ್ನು ಡೈಪರ್ ಗೆ ಹೋಲಿಸಿದ ಹೋಟೆಲ್….!
“ಮಧ್ಯ ರಾತ್ರಿ ಎದ್ದ ನಾನು ಫೋನ್ ಚೆಕ್ ಮಾಡಲು ನೋಡಿದೆ. ಸುಮ್ಮನೇ ಹೀಗೆ ಮಾಡುವ ಬದಲು ಟಿವಿಯಲ್ಲಿ ಹರಾಜಿನ ನೇರ ಪ್ರಸಾರ ನೋಡಲು ನಿರ್ಧರಿಸಿದೆ. ನನ್ನ ಹೆಸರನ್ನು ಕರೆಯಲೆಂದು ಒಂದೂವರೆ ಗಂಟೆ ಕಾದಿದ್ದು ನಿಜವಾಗಿಯೂ ಒಂದು ವಿಚಿತ್ರ ಘಳಿಗೆ. ಶೇನ್ ಬಾಂಡ್‌ರಿಂದ ನನಗೊಂದು ಮೆಸೇಜ್ ಬಂದು ಹರಾಜು ಹೇಗೆ ನಡೆಯುತ್ತಿದೆ ಎಂದು ವಿಷಯ ತಿಳಿಯಿತು” ಎಂದಿದ್ದಾರೆ ಜೇಮಿಸನ್.
“ದುಡ್ಡಿನ ಮೊತ್ತ ಏನು ಎಂಬುದಾಗಲೀ, ನ್ಯೂಜಿಲೆಂಡ್ ಡಾಲರ್‌ಗಳಿಗೆ ಪರಿವರ್ತನೆ ಮಾಡಿದಾಗ ಅದು ಎಷ್ಟಾಗುತ್ತದೆ ಎಂಬುದಾಗಲೀ ನನಗೆ ಗೊತ್ತಾಗಲಿಲ್ಲ” ಎಂದಿದ್ದಾರೆ 6 ಅಡಿ 8 ಇಂಚು ಉದ್ದದ ವೇಗಿ.