ವಿಮಾನ ಹಾರಾಡೋದನ್ನ ನೀವೆಲ್ಲ ನೋಡೇ ನೋಡಿರ್ತಿರಾ? ಆಗಸದಲ್ಲಿ ಬಿಂದಾಸ್ ಆಗಿ ಹಾರಾಡೋದು ನೋಡೋದೆನೇ ಒಂದು ಖುಷಿ. ಆದ್ರೆ ಇದೇ ಫ್ಲೈಟ್‌ಗಳು ಟೇಕಾಫ್ ಆಗುವಾಗ ಇಲ್ಲಾ ಲ್ಯಾಂಡ್ ಆಗುವಾಗ ದೊಡ್ಡ ದೊಡ್ಡ ಅನಾಹುತಗಳೇ ಸಂಭವಿಸಿರುತ್ತೆ.
ಇಂತಹ ಅವಘಡಗಳು ಸಂಭವಿಸಬಾರದು ಅಂತಾನೇ ವಿಮಾನ ನಿಲ್ದಾಣಗಳಲ್ಲಿ ಎಲ್ಲ ರೀತಿ ಸುರಕ್ಷಾ ಕ್ರಮಗಳತ್ತ ಗಮನ ಕೊಡಲಾಗುತ್ತೆ. ಆದರೆ ಗ್ರೀಸ್‌ನಲ್ಲಿರೋ ವಿಮಾನ ನಿಲ್ದಾಣ ನೋಡ್ತಿದ್ರೆನೇ ಎದೆ ಝಲ್ ಅಂತ ಅನಿಸಿಬಿಡುತ್ತೆ. ಯಾಕಂದ್ರೆ ಇಲ್ಲಿ ವಿಮಾನಗಳು ಲ್ಯಾಂಡ್ ಆಗೋದೇ ಭೂಮಿಯಿಂದ ಕೆಲವೇ ಕೆಲವು ಗಜ ಮೇಲಿನಿಂದ.
ನೋಡಿದ್ರಾ ಇಲ್ಲಿ, ಫ್ಲೈಟ್ ಹೇಗೆ ಲ್ಯಾಂಡ್ ಆಗುತ್ತೆ ಅಂತ. ಎಲ್ಲಿ ವಿಮಾನಗಳು ತಲೆ ಮೇಲೆಯೇ ಬಿದ್ದು ಬಿಡುತ್ತೊ ಏನೋ ಅಂತ ಅನಿಸಿಬಿಡುತ್ತೆ. ಹೀಗೆ ಮನುಷ್ಯರ ತಲೆ ಮೇಲಿಂದ ವಿಮಾನ ಲ್ಯಾಂಡ್ ಆಗ್ತಿರೋ ಏರ್‌ಪೋರ್ಟ್ ಹೆಸರು ಸ್ಕಿಯಾಥೋಸ್ ಅಲೆಗ್ಸಾಂಡರ್ ಏರ್‌ಪೋರ್ಟ್. ಪುಟ್ಟ ದ್ವೀಪದಲ್ಲಿರುವ, ಈ ಏರ್‌ಪೋರ್ಟ್ ಪಕ್ಕದಲ್ಲೇ ಸಮುದ್ರ ಇದೆ. ಇಲ್ಲಿ ಬರೋ ಜನರು ಹೀಗೆ ತಲೆ ಮೇಲಿಂದ ಹಾರಾಡೋ ವಿಮಾನ ನೋಡಿ ಭಯಭೀತರಾಗುತ್ತಿದ್ದಾರೆ. ಆದರೂ ಜನರು ಈ ಒಂದು ಅನುಭವವನ್ನ ಪಡೆಯೊದಕ್ಕಂತಾನೇ ಇಲ್ಲಿ ಬರುತ್ತಾರೆ.
ಅಸಲಿಗೆ ಮನುಷ್ಯರ ತಲೆ ಮೇಲೆಯೇ ಲ್ಯಾಂಡ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದು ಪೈಲೆಟ್‌ನ ಟ್ಯಾಲೆಂಟ್‌ಗೆ ಬಿಟ್ಟಿದ್ದು. ಈ ವಿಡಿಯೋ ಗ್ರೇಟ್ ಪ್ಲೇಯರ್ ಅನ್ನೊ ಯೂಟೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ದೃಶ್ಯ ಇಟಲಿಯ ವಿಜ್ ಏರ್ಪೋಟ್‌ನಲ್ಲಿ ಲ್ಯಾಂಡ್ ಆಗುವ ಪ್ಲೇನ್‌ಗಳನ್ನ ನೆನಪಿಸಿಸುತ್ತೆ.
ಇಲ್ಲಿ ವಿಮಾನ ಹಾರುತ್ತ ಹತ್ತಿರ ಬರುತ್ತಿದ್ದ ಹಾಗೆಯೇ, ಜನರು ಕ್ಯಾಮರಾ ಹಿಡಿದುಕೊಂಡು ಆ ಒಂದು ರೋಮಾಂಚನ ಅನುಭವನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಾರೆ. ಯೂಟ್ಯೂಬ್‌ನಲ್ಲಿ ವೈರಲ್ ಆಗಿರೋ ಈ ವಿಡಿಯೋ ನೋಡಿ, ಎಲ್ಲರೂ ಶಾಕ್ ಆಗಿದ್ದಾರೆ. ಈ ರೀತಿ ವಿಮಾನ ಲ್ಯಾಂಡ್ ಆಗುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎಂದು ಕಾಮೆಂಟ್ ಬಾಕ್ಸ್ ಮೇಸೆಜ್ ಹಾಕುತ್ತಿದ್ದಾರೆ. ಇನ್ನು ಕೆಲವರು ಇದೊಂದು ವಿಸ್ಮಯ ಎಂದು ಹೇಳುತ್ತಿದ್ಧಾರೆ.