ರಾಜ್ಯದ ಮಾವು ಬೆಳೆಗಾರರು ಈಗ ತಮ್ಮ ಸ್ವಂತ ಉತ್ಪನ್ನ ಮಾರಾಟ ಮಾಡಲು ತಮ್ಮದೇ ಆದ ಇ- ರೀಟೇಲ್ ವೆಬ್‌ಸೈಟ್ ಸೈಟ್‌ಗಳನ್ನು ಪ್ರಾರಂಭಿಸುತ್ತಿದ್ದಾರೆ, ಈ ಮೂಲಕ ತಮ್ಮನ್ನು ತಾವು ಉದ್ಯಮಿಗಳಾಗಿ ಪರಿವರ್ತಿಸುವ ಹಾದಿಯಲ್ಲಿದ್ದಾರೆ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತವು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಪೋರ್ಟಲ್‌ಗಳು ರೈತರಿಗೆ ಗ್ರಾಹಕ ನೆಲೆಯನ್ನು ನಿರ್ಮಿಸಲು ಸಹಾಯ ಮಾಡಿದೆ ಎಂದು ಹೇಳಿದೆ.
ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮಾವಿನಹಣ್ಣುಗಳನ್ನು ಮಾರಾಟ ಮಾಡಲು 2018 ರಲ್ಲಿ ತನ್ನದೇ ಆದ ಮೀಸಲಾದ ಪೋರ್ಟಲ್ ಅನ್ನು ಸ್ಥಾಪಿಸಿತ್ತು, ಇದು ಅಂದಿನಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದರ ಯಶಸ್ಸು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ತಮ್ಮದೇ ಆದ ಇ- ಪೋರ್ಟಲ್‌ಗಳನ್ನು ಪ್ರಾರಂಭಿಸಲು ಉತ್ತೇಜಿಸಿದೆ. ಈ ಕ್ರಮವು ಮಧ್ಯವರ್ತಿಗಳನ್ನು ತೊಡೆದುಹಾಕಲು ಮತ್ತು ರೈತರು ಉತ್ತಮ ಲಾಭವನ್ನು ಪಡೆಯಲು ಸಹಾಯ ಮಾಡಿದೆ.
BIG NEWS: ಕಲುಷಿತ ನೀರಿಗೆ ಮತ್ತೋರ್ವ ಬಲಿ; ನಾಲ್ಕಕ್ಕೇರಿದ ಸಾವಿನ ಸಂಖ್ಯೆ
ಮಧ್ಯವರ್ತಿಗಳಿಂದ ರೈತರು ಕಿರುಕುಳ ಅನುಭವಿಸುತ್ತಿದ್ದಾರೆ. ನಮ್ಮದೇ ವೆಬ್‌ಸೈಟ್ ಹೊಂದಿರುವುದರಿಂದ ಮಧ್ಯವರ್ತಿಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ, ನಾವು ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರದ ಮಾವು ರೈತ ಹೇಳಿದ್ದಾರೆ. ಅವರು 2021ರಲ್ಲಿ ತಮ್ಮ ವೆಬ್‌ಸೈಟ್ (www.sakkathmango.in) ಮೂಲಕ 15 ಟನ್ ಮಾವು ಮಾರಾಟ ಮಾಡಿದ್ದಾರೆ.
ಈ ವರ್ಷ www.kempegowdamangofarm.com ಸೈಟ್ ಅನ್ನು ಪ್ರಾರಂಭಿಸಿ, ದಿನಕ್ಕೆ ಕನಿಷ್ಠ 20 ಬಾಕ್ಸ್‌ಗಳ ಹಣ್ಣುಗಳಿಗೆ ಆರ್ಡರ್‌ಗಳನ್ನು ಪಡೆಯುತ್ತಿರುವ ಅರುಣ, ನಿಗಮದ ಸಹಕಾರದ ವೆಬ್‌ಸೈಟ್‌ನಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂದು ನಮಗೆ ತೋರಿಸಿದೆ ಎಂದು ಹೇಳಿಕೊಂಡಿದ್ದಾರೆ.
ಒಟ್ಟಾರೆ, ಬೆಳೆಗಾರರು ವೆಬ್ ಸೈಟ್, ಜಾಲತಾಣ ಬಳಸಿ ನಿಧಾನವಾಗಿ ನೇರವಾಗಿ ಗ್ರಾಹಕರನ್ನು ತಲುಪುವ ಪ್ರಯತ್ನ ನಡೆಸಿದ್ದಾರೆ.