ಬಿರುಬೇಸಗೆಯ ಮೇ ತಿಂಗಳಲ್ಲಿ ಉದ್ಯಾನನಗರಿ ಬೆಂಗಳೂರು ಸದಾ ತಂಪಾಗಿರುವ ಶಿಮ್ಲಾ ಮತ್ತು ಕುಲುವಿಗಿಂತಲೂ ತಂಪಾಗಿದೆ. ತಾಪಮಾನ 22.4 ಡಿಗ್ರಿ ಸೆಲ್ಶಿಯಸ್‌ಗೆ ಇಳಿದು ಈ ರೀತಿ ವಾತಾವರಣ ಸೃಷ್ಟಿಯಾಗಿದೆ. ಇದೇ ಅವಧಿಯಲ್ಲಿ ಶಿಮ್ಲಾದಲ್ಲಿ 26 ಡಿಗ್ರಿ ಸೆಲ್ಶಿಯಸ್, ಕುಲುವಿನಲ್ಲಿ 33.2 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.
ಲೋನಾವಾಲದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ನಿರಂತರ ಮತ್ತು ವಿರಳ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ತಾಪಮಾನದಲ್ಲಿ ಇಳಿಕೆಯಾಗಿದೆ.
ರೈಲು ಪ್ರಯಾಣಿಕರೇ ಗಮನಿಸಿ….! ಟಿಕೆಟ್ ಬುಕ್ ನಂತರವೂ ಬೋರ್ಡಿಂಗ್ ಸ್ಟೇಷನ್ ಬದಲಿಗೆ ಅವಕಾಶ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಶುಕ್ರವಾರದ ತಾಪಮಾನ 23 ಡಿಗ್ರಿ ಸೆಲ್ಶಿಯಸ್ ದಾಖಲಾಗುವ ನಿರೀಕ್ಷೆಯಿದೆ. ಇದಕ್ಕೂ ಮೊದಲು ಮೇ 13 ರಂದು, ನಗರದಲ್ಲಿ ಪಾದರಸವು 23 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರಿಂದ ಕಳೆದ 50 ವರ್ಷಗಳಲ್ಲಿ ಮೇ ತಿಂಗಳಲ್ಲಿ ಬೆಂಗಳೂರು ಎರಡನೇ ಅತಿ ಶೀತ ದಿನವನ್ನು ದಾಖಲಿಸಿದೆ. ಇತ್ತೀಚಿನ ಅಸಾನಿ ಚಂಡಮಾರುತದ ಪರಿಣಾಮವಾಗಿ, ನಗರವು ಆಹ್ಲಾದಕರ ವಾತಾವರಣ, ಗಾಳಿ ಮತ್ತು ಮೋಡ ಕವಿದ ವಾತಾವರಣಕ್ಕೆ ಸಾಕ್ಷಿಯಾಗಿದೆ.
ಪ್ರಸಕ್ತ ಮೇ ತಿಂಗಳಲ್ಲಿ ಭಾರೀ ಮಳೆಯಿಂದಾಗಿ ಬೆಂಗಳೂರು ತತ್ತರಿಸಿ ಹೋಗಿದ್ದು, 60 ವರ್ಷಗಳ ಹಿಂದೆ ತನ್ನದೇ ಆದ ದಾಖಲೆಯನ್ನು ಮುರಿಯಲು ಇನ್ನು ಕೆಲವೇ ಮಿ.ಮೀ. ಮಳೆ ಕಡಿಮೆ ಇದೆ. ಕೇವಲ 33 ಮಿಮೀ ಮಳೆಯೊಂದಿಗೆ, ಈ ತಿಂಗಳು ನಗರದ ಇತಿಹಾಸದಲ್ಲಿ ಅತ್ಯಂತ ತೇವಮಯ ಮೇ ತಿಂಗಳಾಗಿ ದಾಖಲಾಗಿದೆ.