ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿರುವ ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ವಿದ್ಯುತ್ ಬಿಲ್ನಲ್ಲಿ ಮೂರು ರೂಪಾಯಿ ಕಡಿತಗೊಳಿಸಿ ಘೋಷಣೆ ಮಾಡಿದ್ದಾರೆ. ಇದರಿಂದ ಪಂಜಾಬ್ ಜನತೆಗೆ ದೀಪಾವಳಿ ಬಂಪರ್ ದೊರಕಿದಂತಾಗಿದೆ.
ಈ ಘೋಷಣೆಯನ್ನು ಮಾಡುತ್ತಾ ಮಾತನಾಡಿದ ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ, ನಾವು ಎಲೆಕ್ಟ್ರಿಸಿಟಿ ದರ ಇಳಿಸುವ ಮುನ್ನ ಒಂದು ಸರ್ವೇಯನ್ನು ಮಾಡಿದ್ದೆವು. ಈ ಸರ್ವೇಯಲ್ಲಿ ಜನರಿಗೆ ಉಚಿತ ಎಲೆಕ್ಟ್ರಿಸಿಟಿ ಬೇಕಿರಲಿಲ್ಲ ಆದರೆ ಕಡಿಮೆ ದರದಲ್ಲಿ ವಿದ್ಯುತ್ ಸಂಪರ್ಕ ಬೇಕು ಎಂದು ಹೇಳಿದ್ದರು ಎಂದಿದ್ದಾರೆ.
ಇದೀಗ 100 ವ್ಯಾಟ್ವರೆಗೆ ನಮ್ಮ ದರವು 1.19 ರೂಪಾಯಿ ಆಗಿದೆ. 100 ರಿಂದ 300 ಯನಿಟ್ಸ್ ಬಳಕೆ ಮಾಡುವವರಿಗೆ ಹೊಸ ವಿದ್ಯುತ್ ದರದ ಪ್ರಕಾರ ಪ್ರತಿ ಯುನಿಟ್ಗೆ 4 ರೂಪಾಯಿ ಬೀಳಲಿದೆ. ಈ ಹಿಂದೆ ಈ ದರವು 7 ರೂಪಾಯಿ ಇದ್ದಿತ್ತು. 300 ಯೂನಿಟ್ಗೂ ಅಧಿಕ ವಿದ್ಯುತ್ ಬಳಕೆಮಾಡುವವರು ಪ್ರತಿ ಯುನಿಟ್ಗೆ 5 ರೂಪಾಯಿ ಪಾವತಿಸಬೇಕು. ಈ ಹೊಸ ದರ ಈಗಾಗಲೇ ಅನ್ವಯವಾಗಲಿದೆ ಎಂದು ಹೇಳಿದರು.
ಈ ಹೊಸ ಆದೇಶದಿಂದಾಗಿ ಪಂಜಾಬ್ ಸರ್ಕಾರವು ಸಂಪೂರ್ಣ ದೇಶದಲ್ಲೇ ಜನತೆಗೆ ಅತಿ ಕಡಿಮೆ ದರದಲ್ಲಿ ಎಲೆಕ್ಟ್ರಿಸಿಟಿ ಒದಗಿಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೊಸ ಆದೇಶದಿಂದಾಗಿ ಪಂಜಾಬ್ ಸರ್ಕಾರದ ಖಜಾನೆಗೆ 3316 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬಿದ್ದಂತಾಗಿದೆ.