ನ್ಯೂಜಿಲೆಂಡ್‌ನ ಉತ್ತರ ದ್ವೀಪದಲ್ಲಿರುವ ಟೌಮಾಟಾ ಹೆಸರಿನ ಗುಡ್ಡೆಯೊಂದಿದೆ. ಆದರೆ ಇದು ಬೆಟ್ಟದ ಅಸಲಿ ಹೆಸರಲ್ಲ. ಈ ಬೆಟ್ಟದ ಪೂರ್ತಿ ಹೆಸರನ್ನು ಇಂಗ್ಲೀಷಿನಲ್ಲೇ ಹಾಕುತ್ತೇವೆ, ಏಕೆಂದರೆ ಕನ್ನಡದಲ್ಲಿ ಅನುವಾದ ಮಾಡಲು ಅಸಾಧ್ಯವಾಗಿದೆ ಅಂತ…!
”Taumatawhakatangihangakoauauotamateaturipukakapikimaungahoronukupokaiwhenuakitanatahu” ಎಂದು 85 ಅಕ್ಷರಗಳ ಹೆಸರಿನ್ನು ಹೊಂದಿರುವ ಈ ಬೆಟ್ಟದ ಹೆಸರನ್ನು ನೋಡಿದ ಕೂಡಲೇ ಯಾರಿಗೂ ಓದಲು ಧೈರ್ಯ ಬರೋದಿಲ್ಲ, ಆದರೆ ಇಲ್ಲಿರುವ ಜನರ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಯಾವುದೇ ಅಧಿಕೃತ ದಾಖಲೆಯಲ್ಲಿ ತಮ್ಮೂರಿನ ಹೆಸರನ್ನು ಬರೆಯುವ ಹೊತ್ತಿಗೇ ಇವರಿಗೆ ಸಾಕು ಸಾಕಾಗಿಬಿಟ್ಟಿರುತ್ತದೆ.
ಸೆಮಿ ಕಂಡಕ್ಟರ್ ಅಭಾವ: ಈ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿ ಹಿಂಪಡೆದ ಸ್ಕೋಡಾ
ಸ್ಥಳೀಯ ಮಾವೋರಿ ಭಾಷೆಯಲ್ಲಿ ಬರೆದಾಗ ಈ ಹೆಸರಿನ ಅರ್ಥ ’ಬೆಟ್ಟಗಳನ್ನು ಹತ್ತುವ ಖಯಾಲಿ ಇರುವ ಟಮಾಟೀ ಹೆಸರಿನ ವ್ಯಕ್ತಿಯೊಬ್ಬ ತನ್ನ ಪ್ರೀತಿ ಪಾತ್ರರಿಗೆ ಕೊಳಲು ನುಡಿಸಿದ ಶೃಂಗ ಇದು’ ಎಂದು ಬರುತ್ತದೆ.
ಈ ಊರಿನಲ್ಲಿ ಬಹಳಷ್ಟು ಜನರು ವಾಸಿಸುವುದಿಲ್ಲ. 305 ಮೀಟರ್ ಎತ್ತರ ಇರುವ ಈ ಗುಡ್ಡೆಯನ್ನು ಸ್ಥಳೀಯರು ಟೌಮಾಟಾ ಗುಡ್ಡೆ ಎಂದು ಕರೆಯುತ್ತಾರೆ. ಟಾಮಾಟೀ ಹೆಸರಿನ ಸ್ಥಳೀಯ ಸೈನಿಕನೊಬ್ಬನ ಹೆಸರಲ್ಲಿ ಈ ಐತಿಹಾಸಿಕ ಜಾಗವನ್ನು ಕರೆಯಲಾಗುತ್ತದೆ. ಹಾಗಾಗೀ ಈ ಹೆಸರು ಇಲ್ಲಿನ ಮಂದಿಗೆ ಹೆಮ್ಮೆಯ ವಿಚಾರವಾಗಿದೆ.
ಯೂರೋಪ್‌ನಲ್ಲೂ ಸಹ ಹೀಗೇ ಬಹು ಉದ್ದವಾದ ಹೆಸರಿನ ಊರೊಂದು ಇದೆ. ’Llanfairpwllgwyngyllgogerychwyrndrobwllllantysiliogogogoch’ಎಂಬ ಹೆಸರಿನ ಈ ಊರು ವೇಲ್ಸ್‌ನಲ್ಲಿದೆ. ಈ ಹೆಸರಿನಲ್ಲಿ 58 ಅಕ್ಷರಗಳು ಇವೆ. ಇದೇ ಅಲ್ಲ, ಇಲ್ಲಿರುವ ರೈಲ್ವೇ ನಿಲ್ದಾಣದ ಹೆಸರೂ ಇದೇ ಆಗಿದೆ. ಇದು ಜಗತ್ತಿನ ಅತಿ ಉದ್ದದ ಹೆಸರಿನ ರೈಲ್ವೇ ನಿಲ್ದಾಣವಾಗಿದೆ.