ಆಗ್ನೇಯ ಏಷ್ಯಾದಲ್ಲಿನ ಕೋವಿಡ್ ಹೆಚ್ಚಳಕ್ಕೆ ಭಾರತ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜೊತೆಗೆ ಭಾರತದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳು ಶೇಕಡಾ 150 ರಷ್ಟು ಏರಿಕೆ ಕಂಡಿವೆ ಎಂದು ಹೇಳಿದೆ.
ಜನವರಿ 23 ರಂದು ಕೊನೆಗೊಂಡ ವಾರದಲ್ಲಿ ಭಾರತದಲ್ಲಿ 15,94,160 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರ ಹಿಂದಿನ ವಾರದಲ್ಲಿ 6,38,872 ಪ್ರಕರಣಗಳು ದಾಖಲಾಗಿವೆ ಇದರಿಂದ ಒಂದೇ ವಾರದ ಅಂತರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ 150% ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಮೂಲಕ ಆಗ್ನೇಯ ಏಷ್ಯಾದ ಬಹುಪಾಲು ಕೊರೋನಾ ಸೋಂಕಿತರು ಭಾರತದವರೆ ಎಂದಿದೆ.
ಪೂರ್ವ ಮೆಡಿಟರೇನಿಯನ್ ಪ್ರದೇಶದ, ಮೊರಾಕೊದಲ್ಲಿ ಹೊಸ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕಳೆದ ವಾರ 4,610 ಇದ್ದ ಪ್ರಕರಣಗಳು ಈಗ 31,701 ಕ್ಕೆ ಏರಿಕೆಯಾಗಿವೆ. ಅಂದರೆ 45% ಹೆಚ್ಚಳವಾಗಿದೆ. ಲೆಬನಾನ್ ನಲ್ಲಿ, ಕಳೆದ ವಾರ 38,112 ಪ್ರಕರಣಗಳು ವರದಿಯಾಗಿದ್ದವು. ಈ ವಾರ ಪ್ರಕರಣಗಳ ಸಂಖ್ಯೆಯಲ್ಲಿ 19%ಹೆಚ್ಚಳವಾಗಿದ್ದು, 45,231 ಹೊಸ ಪ್ರಕರಣಗಳು ದಾಖಲಾಗಿವೆ. ಟುನೀಶಿಯಾದಲ್ಲಿ, ಕಳೆದ ವಾರ 3,948 ಇದ್ದ ಪ್ರಕರಣಗಳು, ಈಗ 194% ಹೆಚ್ಚಳ ಕಂಡಿದ್ದು 13,416 ಹೊಸ ಪ್ರಕರಣಗಳು ದಾಖಲಾಗಿವೆ.