alex Certify ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಗುಡ್‌ ನ್ಯೂಸ್; ಪ್ರಾಜೆಕ್ಟ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ವಿಪ್ರೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಗುಡ್‌ ನ್ಯೂಸ್; ಪ್ರಾಜೆಕ್ಟ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ವಿಪ್ರೋ

ತನ್ನ ಎಲೈಟ್ ನ್ಯಾಷನಲ್ ಟ್ಯಾಲೆಂಟ್ ಹಂಟ್‌ ನೇಮಕಾತಿ ಕಾರ್ಯಕ್ರಮದಡಿ ಇಂಜಿನಿಯರಿಂಗ್ ಪಾಸ್‌ ಔಟ್‌ ಅಭ್ಯರ್ಥಿಗಳಿಂದ ಉದ್ಯೋಗದ ಅರ್ಜಿಗಳಿಗೆ ವಿಪ್ರೋ ಆಹ್ವಾನಿಸಿದೆ.

2022ರಲ್ಲಿ ತಮ್ಮ ವ್ಯಾಸಂಗ ಪೂರೈಸುವ ಇಂಜಿನಿಯರಿಂಗ್ ಅಭ್ಯರ್ಥಿಗಳು ಈ ನೇಮಕಾತಿ ಕಾರ್ಯಕ್ರಮಕ್ಕೆ ತಮ್ಮ ಅರ್ಜಿಗಳನ್ನು ಕಳುಹಿಸಬಹುದಾಗಿದೆ.

ಮೇಲ್ಕಂಡ ಕಾರ್ಯಕ್ರಮದಡಿ ವಿಪ್ರೋ 2022-23ರ ವಿತ್ತೀಯ ವರ್ಷದಲ್ಲಿ 30,000 ಆಫರ್‌ ಲೆಟರ್‌ಗಳನ್ನು ವಿತರಿಸಲಿದೆ. ವಾರ್ಷಿಕ 3.5 ಲಕ್ಷ ರೂಪಾಯಿಗಳ ಪ್ಯಾಕೇಜ್ ಆಫರ್‌ ಅನ್ನು ವಿಪ್ರೋ ಇಟ್ಟಿದೆ.

ಮುಖ್ಯಾಂಶಗಳು:

* ಆಗಸ್ಟ್ 23, 2021ರಿಂದ ಈ ಕಾರ್ಯಕ್ರಮಕ್ಕೆ ನೋಂದಣಿ ಆರಂಭಗೊಂಡಿದ್ದು, ಸೆಪ್ಟೆಂಬರ್‌‌ 15, 2021ಕ್ಕೆ ಅಂತ್ಯವಾಗಲಿದೆ.

* ಸೆಪ್ಟೆಂಬರ್‌ 25-27ರ ವರೆಗೆ ಆನ್ಲೈನ್ ಅಸೆಸ್ಮೆಂಟ್ ಸಹ ನಡೆಯಲಿದೆ.

* 2022ರಲ್ಲಿ ಪಾಸ್‌ಔಟ್‌ ಆಗುವ ಅಭ್ಯರ್ಥಿಗಳಿಗೆ ಈ ಅವಕಾಶ.

* ಗರಿಷ್ಠ ವಯೋಮಿತಿ: 25 ವರ್ಷಗಳು

* ಹುದ್ದೆ: ಪ್ರಾಜೆಕ್ಟ್‌ ಇಂಜಿನಿಯರ್‌

* ಬಿ.ಇ/ಬಿ.ಟೆಕ್‌ (ಕಡ್ಡಾಯ) ಅಥವಾ ಪೂರ್ಣ ಪ್ರಮಾಣದ ಎಂ.ಇ/ಎಂ.ಟೆಕ್‌ (5-ವರ್ಷದ ಸಮಗ್ರ ಕೋರ್ಸ್) ಪದವಿಯನ್ನು ಕೇಂದ್ರ/ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪೂರೈಸಿರಬೇಕು.

* ಫ್ಯಾಶನ್ ತಂತ್ರಜ್ಞಾನ, ಜವಳಿ ತಂತ್ರಜ್ಞಾನ, ಕೃಷಿ ಮತ್ತು ಆಹಾರ ತಂತ್ರಜ್ಞಾನ ಹೊರತುಪಡಿಸಿ ಮಿಕ್ಕೆಲ್ಲಾ ಬ್ರಾಂಚ್‌ನವರು ಅರ್ಜಿ ಸಲ್ಲಿಸಬಹುದು.

* ಇಂಜಿನಿಯರಿಂಗ್‌ನಲ್ಲಿ 60% ಅಥವಾ 6.0 ಸಿಜಿಪಿಎ ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

* ಅಸೆಸ್ಮೆಂಟ್ ಹಂತದಲ್ಲಿ ಒಂದು ಬ್ಯಾಕ್‌ಲಾಗ್‌ಗೆ ಅವಕಾಶವಿದೆ. ಆಫರ್‌ ನೀಡುವ ವೇಳೆ ಎಲ್ಲಾ ಬ್ಯಾಕ್‌ಲಾಗ್‌ ಗಳೂ ಕ್ಲಿಯರ್‌ ಆಗಿರಬೇಕು.

* ಕಳೆದ ಆರು ತಿಂಗಳ ಅವಧಿಯಲ್ಲಿ ವಿಪ್ರೋ ಹಮ್ಮಿಕೊಂಡಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾದ ಅಭ್ಯರ್ಥಿಗಳು ಅನರ್ಹರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...