
ಮದುವೆ, ಹುಟ್ಟುಹಬ್ಬ ಸೇರಿದಂತೆ ಯಾವುದೇ ವಿಶೇಷ ಸಂದರ್ಭ ಇರಲಿ ಉಡುಗೊರೆ ನೀಡುವ ಸಂಪ್ರದಾಯ ಎಲ್ಲ ಕಡೆ ಇದೆ. ಉಳ್ಳವರು ದುಬಾರಿ ಬೆಲೆ ಉಡುಗೊರೆ ನೀಡಿದ್ರೆ ಕೈನಲ್ಲಿ ಕಾಸಿಲ್ಲದೆ ಹೋದವರು ತಮ್ಮ ಮಿತಿಯಲ್ಲಿಯೇ ಉಡುಗೊರೆ ನೀಡ್ತಾರೆ.
ಮೊಬೈಲ್ ಫೋನ್ ನಿಂದ ಹಿಡಿದು ಬಟ್ಟೆ, ಮನೆ ವಸ್ತುಗಳು, ಮೇಕಪ್ ಸಾಮಗ್ರಿ ಸೇರಿದಂತೆ ಫ್ರಿಜ್, ಟಿವಿ ಎಲ್ಲವನ್ನೂ ಉಡುಗೊರೆ ನೀಡ್ತಾರೆ. ಆದ್ರೆ ಈಗಿನ ಜನರು ಸ್ವಲ್ಪ ಬದಲಾಗಿದ್ದಾರೆ. ವಸ್ತುಗಳು, ಬಂಗಾರ, ಹಣ ಮಾತ್ರವಲ್ಲ ಷೇರುಗಳನ್ನು ಉಡುಗೊರೆ ರೂಪದಲ್ಲಿ ನೀಡುತ್ತಾರೆ. ಅದಕ್ಕೆ ಐಟಿ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜಿ ಉತ್ತಮ ಉದಾಹರಣೆ.
ಐಟಿ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜಿ ತಮ್ಮ ಇಬ್ಬರು ಮಕ್ಕಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ರಿಷಾದ್ ಮತ್ತು ತಾರಿಕ್‌ಗೆ 500 ಕೋಟಿ ರೂಪಾಯಿ ಮೌಲ್ಯದ 51 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಉಡುಗೊರೆಯಾಗಿ ನೀಡಿದ ಷೇರುಗಳ ಪಾಲು ಕಂಪನಿಯ ಈಕ್ವಿಟಿಯ ಶೇಕಡಾ 0.2ರಷ್ಟಿದೆ. ಅಜೀಂ ಪ್ರೇಮ್‌ಜಿ ವಿಪ್ರೋ ಕಂಪನಿಯಲ್ಲಿ ಶೇಕಡಾ 4.3ರಷ್ಟು ಪಾಲನ್ನು ಹೊಂದಿದ್ದರೆ, ರಿಷಾದ್ ಮತ್ತು ತಾರಿಕ್ ಶೇಕಡಾ 0.03 ರಷ್ಟು ಪಾಲನ್ನು ಹೊಂದಿದ್ದಾರೆ. ಷೇರುಮಾರುಕಟ್ಟೆಯಲ್ಲಿನ ಬದಲಾವಣೆಯಿಂದಾಗಿ ವಿಪ್ರೋ ಷೇರುಗಳ ಬೆಲೆ ಇಂದು ಕುಸಿದಿದೆ. ಸದ್ಯ ಷೇರಿನ ಬೆಲೆ 470 ರೂಪಾಯಿ.