ಚಳಿಗಾಲ ಬಂದ ಕೂಡಲೇ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ವಿಪರೀತ ಚಳಿ, ಕೈಕಾಲು ಒಡೆಯುವುದು, ತುರಿಕೆ ಚಳಿಗಾಲದಲ್ಲಿ ಸಹಜ. ಕೊರೆಯುವ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ದಪ್ಪನೆಯ ಬಟ್ಟೆಗಳನ್ನು ಬಳಸಿದರೂ ಚಳಿಯ ಅನುಭವ ಉಂಟಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸಿಗುವ ಈ ಆಹಾರಗಳನ್ನು ಬಳಸಿದರೆ ಚಳಿಯಿಂದ ರಕ್ಷಣೆ ಮಾತ್ರವಲ್ಲದೆ ಆರೋಗ್ಯಕ್ಕೂ ಉತ್ತಮ ಪೌಷ್ಟಿಕಾಂಶ ನೀಡಿದಂತಾಗುತ್ತದೆ.
ಸಿಹಿ ಆಲೂಗಡ್ಡೆ ಚಳಿಗಾಲದಲ್ಲಿ ಬಳಸಬೇಕಾದ ಬಹುಮುಖ್ಯ ತರಕಾರಿ. ಅದರಲ್ಲಿರುವ ಕ್ಯಾಲೋರಿಗಳು ಮತ್ತು ಪೋಷಕಾಂಶಗಳಿಂದ ದೇಹವು ಹೆಚ್ಚಿನ ಶಕ್ತಿಯನ್ನು ಪಡೆಯುತ್ತದೆ. ಸಿಹಿ ಆಲೂಗಡ್ಡೆಯಲ್ಲಿನ ಫೈಬರ್, ವಿಟಮಿನ್ ಎ ಮತ್ತು ಪೊಟ್ಯಾಸಿಯಮ್ ದೇಹಕ್ಕೆ ಅವಶ್ಯಕವಾಗಿದೆ. ಇದರ ನಿಯಮಿತ ಸೇವನೆಯಿಂದ ಮಲಬದ್ಧತೆ, ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ನಟಿ ದಿಶಾ ಪಟಾನಿಯ ಬೀಚ್ ಫೋಟೋ ನೋಡಿ ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್..!
ನವಿಲುಕೋಸು, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ವಿಟಮಿನ್-ಕೆ ಮತ್ತು ವಿಟಮಿನ್-ಎ ಹೊಂದಿದ್ದು, ಇದರ ಎಲೆಗಳು ಹೃದಯ, ರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
‘ಮನಿಕೆ ಮ್ಯಾಗೆ ಹಿತೆ’ಗೆ ಸ್ಟೆಪ್ಸ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್
ಚಳಿಗಾಲದಲ್ಲಿ ಅತಿಹೆಚ್ಚು ಬಳಸುವ ಹಣ್ಣು ಖರ್ಜೂರ. ಇದು ಕಡಿಮೆ ಕೊಬ್ಬಿನಾಂಶದ ಹೊಂದಿದ್ದು, ತೂಕ ಹೆಚ್ಚದಂತೆ ನೋಡಿಕೊಳ್ಳುತ್ತದೆ.
ಬಾದಾಮಿ ಮತ್ತು ವಾಲ್ನಟ್ ನಮ್ಮ ನರಮಂಡಲವನ್ನು ಸಕ್ರಿಯವಾಗಿರಿಸುತ್ತದೆ. ದೇಹದಲ್ಲಿನ ಇನ್ಸುಲಿನ್ ಸಮತೋಲನವನ್ನು ಕಾಪಾಡುತ್ತದೆ.