ಬೆಂಗಳೂರು: ಮಹಾ ಮಳೆಯಿಂದಾಗಿ ಸಂಕಷ್ಟ ಅನುಭವಿಸಿದ ಜನರಿಗೆ ರಾಜ್ಯದಲ್ಲಿ ತಾಪಮಾನ ಕುಸಿದು ಚಳಿ ತೀವ್ರಗೊಂಡಿರುವುದು ನುಂಗಲಾರದ ತುತ್ತಾಗಿದೆ.
ಮೂಲೆ ಸೇರಿಕೊಂಡಿದ್ದ ಬೆಚ್ಚನೆಯ ಉಡುಪುಗಳೆಲ್ಲ ಜನ ಹುಡುಕಿ ಹೊರತೆಗೆದಿದ್ದಾರೆ. ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಕುಸಿತ ಕಾಣುತ್ತಿದ್ದು, ಚಳಿಯ ತೀವ್ರತೆ ದಿನೇದಿನೇ ಹೆಚ್ಚಾಗತೊಡಗಿದೆ.
ವಿಜಯಪುರ, ಬೀದರ್ ನಲ್ಲಿ 12 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನ ದಾಖಲಾಗಿದೆ. ಅದೇ ರೀತಿ ಹಾಸನ, ಧಾರವಾಡ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಭಾಗದಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ. ಹವಾಮಾನದಲ್ಲಿ ಏರಿಳಿತ ಉಂಟಾಗುತ್ತಿರುವುದರಿಂದ ರಾತ್ರಿಯಾಗುತ್ತಲೇ ಥರಗುಟ್ಟುವ ಚಳಿಯಿಂದ ಜನ ಹೊರಗೆ ಬರುತ್ತಿಲ್ಲ. ಸಂಜೆಯಾಗುತ್ತಲೇ ಮನೆ ಸೇರಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲಲ್ಲಿ ಬೆಂಕಿ ಹಾಕಿಕೊಂಡು ಕೈಬಿಸಿ ಮಾಡಿಕೊಳ್ಳುವ ದೃಶ್ಯಗಳು ಕಾಣಸಿಗುತ್ತಿವೆ.