ಜೇನುಗೂಡಲ್ಲಿ ಸಂಗ್ರಹವಾಗಿರುವ ಸವಿಯಾದ ಜೇನುತುಪ್ಪವನ್ನು ತಿನ್ನಲು ಕರಡಿಗಳು ಬಹಳ ಇಷ್ಟಪಡುತ್ತವೆ ಎಂಬುದು ಗೊತ್ತಿರುವ ವಿಚಾರ. ಇಲ್ಲೊಂದು ಕರಡಿ ಎತ್ತರದ ನೀರಿನ ತೊಟ್ಟಿಯ ಮೆಟ್ಟಿಲು ಹತ್ತಿ ಜೇನು ಸವಿಯಲು ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊಗೆ ಸೂಕ್ತವಾಗಿ ಶೀರ್ಷಿಕೆ ಸಹ ನೀಡಿದ್ದಾರೆ.
ವೀಡಿಯೊದಲ್ಲಿ, ದೊಡ್ಡ ಕರಡಿಗಳ ಜೋಡಿಯು ತಮ್ಮ ನೆಚ್ಚಿನ ಆಹಾರ ಜೇನು ಹುಡುಕಿ ಅಂಕುಡೊಂಕಾದ ನೀರಿನ ಟ್ಯಾಂಕ್ ಮೆಟ್ಟಿಲನ್ನು ಹತ್ತುತ್ತಿರುವುದನ್ನು ಕಾಣಬಹುದು. ಒಂದು ಕರಡಿ ಮೆಟ್ಟಿಲುಗಳ ತಳದಲ್ಲಿರುವ ಜೇನುಗೂಡಿನ ಬಳಿ ತಲುಪಲು ತನ್ನ ಪಂಜಗಳನ್ನು ವಿಸ್ತರಿಸಿದರೆ ಇನ್ನೊಂದು ಮೆಟ್ಟಿಲುಗಳ ಮೂಲಕ ಟ್ಯಾಂಕ್ ತುದಿಯನ್ನು ತಲುಪಿತು.
ನೆಟ್ಟಿಗರು ವೀಡಿಯೊವನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ. ಈ ವೀಡಿಯೊವನ್ನು ರೆಕಾರ್ಡ್ ಮಾಡಿದ ವ್ಯಕ್ತಿಗೆ ಹ್ಯಾಟ್ಸ್ ಆಫ್ ಎಂದು ಒಬ್ಬರು ಕಮೆಂಟ್ ಮಾಡಿದರೆ ಮತ್ತೊಬ್ಬರು ಪ್ರಕೃತಿ ವೆೈಬ್ಸ್ ಯಾವಾಗಲೂ ಉತ್ತಮವಾಗಿರುತ್ತದೆ ಎಂದು ಬರೆದಿದ್ದಾರೆ.