ಬಲವಾಗಿ ಬೀಸಿದ ಗಾಳಿಯಿಂದ ಬಹುಮಹಡಿ ಕಟ್ಟಡದ ವಿಂಡೋ ಕ್ಲೀನಿಂಗ್ ಕ್ರೇಡಲ್ ಪಕ್ಕದ ಕಟ್ಟಡಕ್ಕೆ ಅಪ್ಪಳಿಸುವ ವಿಡಿಯೋ ವೈರಲ್ ಆಗಿದ್ದು, ಹೌಹಾರುವಂತಿದೆ.
ಮಂಗಳವಾರ ಮಧ್ಯಾಹ್ನ ಮಲೇಷ್ಯಾ ರಾಜಧಾನಿಯಲ್ಲಿ ಚಂಡಮಾರುತದಿಂದಾಗಿ ಕಿಟಕಿ ಕ್ಲೀನರ್‌ಗಳನ್ನು ಹೊತ್ತ ಕ್ರೇಡಲ್ ತೂಗಲು ಆರಂಭಿಸಿತ್ತು. ಬಲವಾದ ಗಾಳಿಯು ಬಹುಮಹಡಿ ಕಟ್ಟಡದ ಬದಿಯಲ್ಲಿ ಅಪ್ಪಳಿಸಿದಾಗ ಕಿಟಕಿ ಗಾಜು ಪುಡಿಯಾಯಿತು. 48 ಅಂತಸ್ತಿನ ಟಿಎಸ್ ಲಾ ಟವರ್‌ನಲ್ಲಿ ಈ ಘಟನೆ ನಡೆದಿದೆ.
ಹದಿಹರೆಯದವರು ಸೈಬರ್ ವಂಚನೆಗೆ ಒಳಗಾಗುವ ಅಪಾಯ ಹೆಚ್ಚು: ಅಧ್ಯಯನ
ಇಡೀ ಸನ್ನಿವೇಶದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಿಸಿದೆ.
ಗಾಳಿಯ ಬಲವಾದ ರಭಸದಿಂದಾಗಿ ಕಾರ್ಮಿಕರು ಗಾಬರಿಯಲ್ಲಿ ಪರದಾಡುವುದನ್ನು ಕಾಣಬಹುದು. ಅದೃಷ್ಟವಶಾತ್ ಅಪಾಯವಾಗಿಲ್ಲ., ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ರಕ್ಷಿಸುವ ಮೊದಲು ಕಾರ್ಮಿಕರು ಪಾರಾಗಿದ್ದಾರೆ.
ಇನ್ನು ಮುಂದೆ ಹೊರಾಂಗಣ ಕಾರ್ಯ ಆರಂಭಿಸುವ ಮೊದಲು ಹವಾಮಾನವನ್ನು ನೋಡುವುದು ಉತ್ತಮ ಎಂದು ಫೇಸ್‌ಬುಕ್ ಬಳಕೆದಾರರು ಹೇಳಿದ್ದಾರೆ.
Window cleaners’ cradle crashes into skyscraper due to strong winds in terrifying video from Kuala Lumpur