ಜಾಗತಿಕ ತಾಪಮಾನದಲ್ಲಿನ ಏರಿಕೆಯಾಗಿದೆ. ತಾಪಮಾನ ಏರಿಕೆಯಾಗದಂತೆ ತಡೆಯುವುದು ಒಂದು ಪ್ರಮುಖ ಕಾಳಜಿ, ಅದು ಪರಿಸರದ ಮೇಲೆ ತರುವ ಪರಿಣಾಮವನ್ನು ಸಹ ನಾವು ಅರ್ಥಮಾಡಿಕೊಳ್ಳಬೇಕು.
ಅಂಥದ್ದರಲ್ಲಿ ಟಾಟಾ ಪಂಚ್ ಮಾಲೀಕರು ಈ ತಾಪಮಾನ ಸಮಸ್ಯೆ ಎದುರಿಸಿದ್ದಾರೆ ಎಂದು ತೋರುತ್ತದೆ, ಏಕೆಂದರೆ ಅವರು ಶೀಘ್ರವಾಗಿ ತಣ್ಣಗಾಗಲು ತಮ್ಮ ಕಾರಿನಲ್ಲಿ ವಿಂಡೋ ಎಸಿ ಸ್ಥಾಪಿಸಲು ಸರ್ಕಸ್ ನಡೆಸಿದ್ದು, ಇದರ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಎಫ್ಡಬ್ಲ್ಯೂಎಸ್ ಫನ್ ವಿತ್ ಸೆೈನ್ಸ್ ಚಾಲನ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಕಾರಿನ ಲಗೇಜ್ ಕಂಪಾರ್ಟ್ಮೆಂಟ್ನಲ್ಲಿ ವಿಂಡೋ ಎಸಿ ಇಡಲಾಗಿದ್ದು, ಅದರ ಜೊತೆ ಬ್ಯಾಟರಿಗಳ ಸೆಟ್ ಸಹ ಜೋಡಿಸಲಾಗಿದೆ. ಕ್ಯಾಬಿನ್ ಅನ್ನು ತಂಪಾಗಿರಿಸಲು ಪ್ಲಾಸ್ಟಿಕ್ ಪರದೆ ಇಳಿಬಿಡಲಾಗಿದೆ. ಅದು ಕೆಲಸ ಮಾಡಲು ಒಂದಷ್ಟುಸಾಹಸ ಮಾಡಲಾಗಿದೆ. ಪಂಚ್ ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಅತ್ಯಂತ ಚಿಕ್ಕ ಎಸ್ಯುವಿಯಾಗಿದೆ.
ಪಂಚ್ನ ಬೆಲೆಯು ರೂ. 5.92 ಲಕ್ಷದಿಂದ (ಎಕ್ಸ್-ಶೋ ರೂಂ) ಪ್ರಾರಂಭವಾಗುತ್ತದೆ ಮತ್ತು ಟಾಪ್-ಸ್ಪೆಕ್ ಟ್ರಿಮ್ಗಾಗಿ ರೂ. 9.48 ಲಕ್ಷ ರೂ. ವರೆಗೆ ಹೋಗುತ್ತದೆ.