ಬೀದರ್: ಮಳೆಯೊಂದಿಗೆ ಬೀಸಿದ ಬಾರಿ ಗಾಳಿಗೆ ಮನೆ ಛಾವಣಿಯ ತಗಡಿನ ಶೀಟ್ ಗಳು ಗಾಳಿಯಲ್ಲಿ ಹಾರಿ ಹೋಗಿದೆ. ತಗಡಿಗೆ ಕಟ್ಟಲಾಗಿದ್ದ ಜೋಕಾಲಿ ಕೂಡ ಮಗು ಸಮೇತ ಹಾರಿ ಹೋದ ಘಟನೆ ಬುಧೇರಾ ಗ್ರಾಮದಲ್ಲಿ ನಡೆದಿದೆ. ಜೋಕಾಲಿಯಲ್ಲಿದ್ದ ಮಗುವಿಗೆ ಗಂಭೀರ ಗಾಯಗಳಾಗಿವೆ.
ಮಳೆಯೊಂದಿಗೆ ಭಾರಿ ಗಾಳಿ ಬೀಸಿದ್ದರಿಂದಾಗಿ ಧನರಾಜ್ ಎಂಬುವರ ಮನೆಯ ತಗಡಿನ ಶೀಟ್ ಗಳು ಹಾರಿದ್ದು, ಅದಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿದ್ದ ಮಗು ಕೂಡ ಹಾರಿ ಬಿದ್ದಿದೆ. ಇದರಿಂದಾಗಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಮಾಹಿತಿ ತಿಳಿದ ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ಕೂಡಲೇ ಗ್ರಾಮಕ್ಕೆ ಆಂಬುಲೆನ್ಸ್ ಕಳುಹಿಸಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.