ಮಾಜಿ ಸುದ್ದಿ ನಿರೂಪಕಿ ಮತ್ತು ನಟಿ ಫಾತಿಮಾ ಬಾಬು ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಕೆಣಕುವವರನ್ನು ಸುಮ್ಮನೇ ಬಿಡುವುದಿಲ್ಲ. ನೇರವಾಗಿ ತಿರುಗೇಟಿನ ಉತ್ತರವನ್ನು ಕೊಡುತ್ತಾರೆ. ಇತ್ತೀಚೆಗೆ ಅವರ ಫೇಸ್ ಪುಕ್ ಪೇಜ್ ನಲ್ಲಿ ಅನುಚಿತವಾಗಿ ಪ್ರಶ್ನಿಸಿದವರೊಬ್ಬರಿಗೆ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ.
ಅಭಿಮಾನಿಯೊಬ್ಬರು ಫಾತಿಮಾ ಬಾಬು ಅವರ ಫೇಸ್‌ಬುಕ್ ಫೋಟೋದ ಕಾಮೆಂಟ್‌ಗಳ ವಿಭಾಗದಲ್ಲಿ “ನಿಮ್ಮ ಪತಿ ಹಿಂದೂ. ನಿಮ್ಮ ಮಕ್ಕಳಿಗೆ ಹಿಂದೂ ಹೆಸರಿಲ್ಲ ಏಕೆ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಫಾತಿಮಾ, ” ಇದರಿಂದ ನನ್ನ ಮಕ್ಕಳಿಗೇನು ತೊಂದರೆ ಇಲ್ಲ, ನಿಮಗೇಕೆ ತೊಂದರೆ ಆಗುತ್ತಿದೆ?” ಎಂದು ಕೇಳಿದ್ದಾರೆ. ಮತ್ತೆ ಕಮೆಂಟ್ ಮುಂದುವರೆಸಿದ ಅಭಿಮಾನಿ “ನನಗೆ ಕೇಳಬೇಕೆಂದು ಅನಿಸಿದ್ದರಿಂದ ನಾನು ಪ್ರಶ್ನೆಯನ್ನು ಕೇಳಿದೆ” ಎಂದಿದ್ದಾರೆ.
ಅದಕ್ಕೆ ಉತ್ತರಿಸಿದ ಫಾತಿಮಾ ಬಾಬು, “ನನ್ನ ಮದುವೆಯನ್ನು ಹಿಂದೂ ವ್ಯಕ್ತಿಯೊಂದಿಗೆ ಮಸೀದಿಯಲ್ಲಿ ಮಾಡಿಕೊಂಡಿದ್ದೇನೆ. ಮತ್ತು ನನ್ನ ಮಕ್ಕಳಿಗೆ ಹೆಸರುಗಳನ್ನು ಇಡಲಾಗಿದೆ. ಇದು ನಿಮಗೆ ಏಕೆ ದೊಡ್ಡ ವಿಷಯವಾಗಿದೆ?” ಎಂದಿದ್ದಾರೆ. ಇದಕ್ಕೆ ಅಭಿಮಾನಿ “ಇದು ಸಾರ್ವಜನಿಕ ವೇದಿಕೆ, ನಾನು ಅನುಚಿತವಾಗಿ ಏನನ್ನೂ ಕೇಳಿಲ್ಲ” ಎಂದು ಹೇಳಿದರು. ಅದಕ್ಕೆ ಫಾತಿಮಾ “ಯಾವ ಸಾರ್ವಜನಿಕ ವೇದಿಕೆ? ಇದು ಸಾರ್ವಜನಿಕ ವೇದಿಕೆ ಎಂಬ ಕಾರಣಕ್ಕೆ ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಅದರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.