ಕಳೆದ ಕೆಲ ವರ್ಷಗಳಿಂದ ಅಂತರ್ಜಾದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಕ್ಸೇವಿಯರ್ ಆನ್ಲೈನ್‌ನಲ್ಲಿ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದಾರೆ.
ತಮ್ಮ ಜೀವಿತದ ಕುರಿತಂತೆ ಮಹತ್ವದ ಅಪ್ಡೇಟ್ ಒಂದನ್ನು ಹಂಚಿಕೊಂಡಿರುವ ಕ್ಸೇವಿಯರ್, ಆನ್ಲೈನ್‌ನಲ್ಲಿ ತಮಗೆ ಯಾವ ಮಟ್ಟಕ್ಕೆ ಜನಪ್ರಿಯತೆ ಸಿಕ್ಕಿದೆ ಹಾಗೂ ತಾವು ಮುಂದೇನು ಮಾಡಲು ಬಯಸಿದ್ದಾರೆ ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
“2010ರಲ್ಲಿ ನಾನು ಈ ಖಾತೆಯನ್ನು ತೆರೆದು ನನ್ನ ತರಲೆ ಕಾಮೆಂಟ್‌ಗಳ ಮೂಲಕ ಜನರಲ್ಲಿ ಹಾಸ್ಯಪ್ರಜ್ಞೆಯ ಚಟಾಕಿಗಳನ್ನು ಹಾರಿಸುತ್ತಿದ್ದೆ. ಇವನ್ನೆಲ್ಲಾ ಮಾಡುವುದು ನನಗೆ ಎಲ್ಲಕ್ಕಿಂತ ಹೆಚ್ಚಿನ ಸಂತೃಪ್ತಿ ನೀಡುತ್ತಿತ್ತು,” ಎಂದು ಟ್ವೀಟ್ ಮಾಡಿದ್ದಾರೆ ಕ್ಸೇವಿಯರ್.
“2023ಕ್ಕೆ ಬಂದಾಗ…….. ಎಲ್ಲಾ ದೊಡ್ಡ ಮೀಮ್ ಪೇಜ್‌ಗಳಲ್ಲೂ ಕಾಣಿಸಿಕೊಂಡಿರುವ ನನ್ನನ್ನು ಅನೇಕ ಸೆಲೆಬ್ರಿಟಿಗಳು ಫಾಲೋ ಮಾಡಿದ್ದಾರೆ (ಸೋನಂ ಬಾಜ್ವಾರ ಮಾತ್ರ ಇನ್ನೂ ಇಲ್ಲ), ಕೆಲ ಕ್ರೇಜ಼ೀ ಆನ್ಲೈನ್ ಸ್ನೇಹಿತರನ್ನು ಮಾಡಿಕೊಂಡಿದ್ದೇನೆ. ಭಾರತದ ಪ್ರತಿಷ್ಠಿತ ಕಾನೂನು ಸಂಸ್ಥೆಯೊಂದರಲ್ಲಿ ಕಾನೂನು ಅಭ್ಯಾಸ ಮಾಡಲು ಹೊರಡಲಿದ್ದೇನೆ. ನನ್ನ ನಿಜ ಹೆಸರು ಪ್ರಶ್ನೆಯಾಗಿಯೇ ಉಳಿಯಲಿದೆ!,” ಎಂದು ನೆಟ್ಟಿಗರನ್ನು ಗೆಸ್ಸಿಂಗ್‌ನಲ್ಲಿಟ್ಟುರುವ ಕ್ಸೇವಿಯರ್, ತಮ್ಮದೇ ಶೈಲಿಯಲ್ಲಿ ಚೇಷ್ಟೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಅಮೆರಿಕದ ಮಿನೆಸೋಟಾದ ಮಿನ್ನೀಪೊಲೀಸ್‌ನಲ್ಲಿರುವ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಸೇವಿಯರ್ ಅಂಕಲ್‌ರ ನಿಜನಾಮದ ಕುರಿತು ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.