ಭಾರತ ಕ್ರಿಕೆಟ್ ತಂಡದ ಹೊಡಿಬಡಿಯ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ದಿನಕ್ಕೊಂದು ಸುದ್ದಿ ಬರುತ್ತಿದೆ. ಇದೀಗ ಭಾರತ ಕ್ರಿಕೆಟ್ ತಂಡದ ನಿರ್ಗಮಿತ ಮುಖ್ಯ ಕೋಚ್ ರವಿಶಾಸ್ತ್ರಿ ಕೊಹ್ಲಿ ಕುರಿತು ಮಹತ್ವದ ಸುಳಿವು ನೀಡಿದ್ದಾರೆ.
ಸದ್ಯದ ಏಕದಿನ ಮತ್ತು ರಾಷ್ಟ್ರೀಯ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಬ್ಯಾಟಿಂಗ್‌ನತ್ತ ಮಾತ್ರ ಗಮನಹರಿಸಲು ಸೀಮಿತ ಓವರ್‌ಗಳ ನಾಯಕತ್ವವನ್ನು ಸಹ ತ್ಯಜಿಸಬಹುದು ಎಂದು ಭಾವಿಸುವುದಾಗಿ ಹೇಳಿದ್ದಾರೆ.
ಇಂಡಿಯಾ ಟುಡೇ ಜೊತೆಗಿನ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಶಾಸ್ತ್ರಿ, ಕೆಂಪು ಬಾಲ್ ಕ್ರಿಕೆಟ್‌ನಲ್ಲಿ ಭಾರತ ಕಳೆದ 5 ವರ್ಷಗಳಿಂದ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ವಿಶ್ವದ ನಂ.1 ತಂಡವಾಗಿದೆ. ಅವರು ಬ್ಯಾಟಿಂಗ್‌ನ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ, ಹೀಗಾಗಿ ಪ್ರಮುಖ ತೀರ್ಮಾನ ಮುಂದಿನ ದಿನಗಳಲ್ಲಿ ಸಂಭವಿಸಬಹುದು, ಅದು ತಕ್ಷಣ ಸಂಭವಿಸುತ್ತದೆ ಎಂದು ಯೋಚಿಸುವುದು ಬೇಡ, ಅದು ಸಂಭವಿಸಬಹುದು ಎಂದಿದ್ದಾರೆ.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: SSLC ಪಾಸಾದವರಿಗೆ 2 ಸಾವಿರ, PUC ಗೆ 2500., ಪದವಿಗೆ 3500, ಪಿಜಿಗೆ 4500 ರೂ. ಭತ್ಯೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ
ಈ ಹಿಂದೆ ಅನೇಕ ಆಟಗಾರರು ಯಶಸ್ವಿ ಅವಧಿ ಬಳಿಕ ಬ್ಯಾಟಿಂಗ್‌ನತ್ತ ಗಮನಹರಿಸಲು ನಾಯಕತ್ವ ಬಿಟ್ಟುಕೊಟ್ಟಿದ್ದಾರೆ ಎಂದು ಅವರು ತಮ್ಮ ಮಾತು ಮುಂದುವರಿಸಿದರು.
ಕೊಹ್ಲಿ ಈಗಾಗಲೇ ಟಿ20 ನಾಯಕತ್ವ ತ್ಯಜಿಸಿದ್ದಾರೆ. ರೋಹಿತ್‌ಗೆ ನಾಯಕತ್ವದ ಹೊಣೆ ನೀಡಲಾಗಿದೆ. ವಿಶ್ವಕಪ್ ಸೂಪರ್ 12 ಹಂತದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೋಲಿನಿಂದ ಭಾರತವು ಪಂದ್ಯಾವಳಿಯಿಂದ ಬೇಗನೆ ನಿರ್ಗಮಿಸುವಂತಾದ ಕಾರಣ ಕೊಹ್ಲಿ ಹಾಗೂ ಶಾಸ್ತ್ರಿ ಅವರ ಅವಧಿ ಕೊನೆಗೊಂಡಿತು.
ಕೊಹ್ಲಿ-ಶಾಸ್ತ್ರಿ ಕಾಲದಲ್ಲಿ ಭಾರತ ತಂಡ ವಿಶೇಷವಾಗಿ ಟೆಸ್ಟ್‌ಗಳಲ್ಲಿ ಅದ್ಭುತ ಗೆಲುವು ಸಾಧಿಸಿತ್ತು. ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು ಮತ್ತು ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇತರ ಕಡೆ ನಡೆದ ಪಂದ್ಯಗಳಲ್ಲಿ ವಿಜಯ ಸಾಧಿಸಿತ್ತು.