ತಿರುವನಂತಪುರಂ: ಪಿಎಫ್ಐ ಹಾಗೂ ಎಸ್ ಡಿ ಪಿ ಐ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿ ಹಲವರನ್ನು ಬಂಧಿಸಿರುವ ಬೆನ್ನಲ್ಲೇ ಕೇರಳದಲ್ಲಿ ಎಸ್ ಡಿ ಪಿ ಐ ಹಾಗೂ ಪಿಎಫ್ಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅಲ್ಲದೇ ಆರ್ ಎಸ್ ಎಸ್ ಮುಖಂಡರಿಗೆ ಬೆದರಿಕೆ ಹಾಕಿದ್ದಾರೆ.
ಎನ್ ಐಎ ದಾಳಿ ಖಂಡಿಸಿ ಎರ್ನಾಕುಲಂನಲ್ಲಿ ಪ್ರತಿಭಟನೆ ನಡೆಸಿರುವ ಎಸ್ ಡಿ ಪಿ ಐ ಸಂಘಟನೆ, ಕೇಂದ್ರ ಸರ್ಕಾರ ಹಾಗೂ ಆರ್ ಎಸ್ ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ವೇಳೆ ಎಸ್ ಡಿ ಪಿ ಐ ಮುಖಂಡ ಶಿಜೂ ಬಕ್ಕರ್ ಆರ್ ಎಸ್ ಎಸ್ ಪ್ರಮುಖರಿಗೆ ಧಮ್ಕಿ ಹಾಕಿದ್ದು, ಕೇವಲ 10 ಸೆಕೆಂಡ್ ಗಳಲ್ಲಿ ಆರ್ ಎಸ್ ಎಸ್ ಪ್ರಮುಖರನ್ನು ಮುಗಿಸುತ್ತೇವೆ. ಆರ್ ಎಸ್ ಎಸ್ ನಾಯಕರು ಬೀದಿನಾಯಿಗಳು ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ನಾವು ಗೆಲ್ಲುತ್ತೀವೋ ಸೋಲುತ್ತೀವೋ, ಏನೇ ಆದರೂ ಜೀವ ಕೊಡಲು ಸಿದ್ಧ. 100 ಅಲ್ಲ 500 ಮಂದಿಯನ್ನಾದರೂ ಬಂಧಿಸಿ. ಯಾವ ಕಾರಣಕ್ಕೂ ನಿಮ್ಮ ಮುಂದೆ ಜಗ್ಗಲ್ಲ. ಆರ್ ಎಸ್ ಎಸ್ ಪ್ರಮುಖರನ್ನು ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.
