ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕ್ರೌರ್ಯ ಮತ್ತು ಇಸ್ಲಾಂ ಮೂಲಭೂತವಾದದ ಅಡಿಯಲ್ಲಿ ನಡೆಯುತ್ತಿರುವ ಅರಾಜಕತೆಯನ್ನು ಆರ್‍ಎಸ್‍ಎಸ್ ಸಂಘಟನೆಗೆ ಹೋಲಿಕೆ ಮಾಡಿದ್ದ ಬಾಲಿವುಡ್‍ನ ಖ್ಯಾತ ಗೀತ ಸಾಹಿತಿ ಜಾವೇದ್ ಅಖ್ತರ್ ಅವರಿಗೆ ಬಿಜೆಪಿಯ ಶಾಸಕ ರಾಮ್ ಕದಮ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಟ್ವಿಟರ್‍ನಲ್ಲಿ ವಿಡಿಯೋ ಮಾಡಿರುವ ಕದಂ ಅವರು “ಅಖ್ತರ್ ಹೇಳಿಕೆಗಳು ನಾಚಿಕೆಗೇಡು. ಸಂಘ ಪರಿವಾರದ ಮತ್ತು ವಿಶ್ವ ಹಿಂದೂ ಪರಿಷದ್‍ನ ಕೋಟ್ಯಂತರ ಕಾರ್ಯಕರ್ತರಿಗೆ ಅವರು ಅವಮಾನ ಮಾಡಿದ್ದಾರೆ. ಸೂಕ್ತ ರೀತಿಯಲ್ಲಿ ಕ್ಷಮೆ ಕೇಳದಿದ್ದರೆ ಅವರ ಯಾವುದೇ ಸಿನಿಮಾಗಳು ಬಿಡುಗಡೆ ಆಗದಂತೆ ಮಾಡುತ್ತೇವೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ದೇಶದಲ್ಲಿ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅಲ್ಲಿನ ನಾಯಕರು ರಾಜಧರ್ಮ ಪಾಲನೆ ಮಾಡುತ್ತಿದ್ದಾರೆ. ಅಲ್ಲಿನ ಸ್ಥಿತಿಗತಿಗಳು ಅರಾಜಕತೆಯಿಂದ ಕೂಡಿಲ್ಲ ಎಂಬುದನ್ನು ಅಖ್ತರ್ ಗಮನಿಸಬೇಕು. ತಾಯಿ ಭಾರತಿಯ ನೆಲಕ್ಕೆ ಕೈಮುಗಿದು ಅವರು ಕ್ಷಮೆಯಾಚಿಸಬೇಕು. ರಾಷ್ಟ್ರಕ್ಕಾಗಿ ತಮ್ಮ ಜೀವನ ಅರ್ಪಣೆ ಮಾಡಿರುವ ಸಂಘದ ಪ್ರಮುಖರಿಗೆ ಗೌರವ ಸಲ್ಲಿಸಬೇಕು ಎಂದು ಕದಮ್ ಆಗ್ರಹಿಸಿದ್ದಾರೆ.
Sex Strike: ಲೈಂಗಿಕ ಮುಷ್ಕರಕ್ಕೆ ಕರೆ ನೀಡಿದ ನಟಿ, ಸೆಕ್ಸ್ ನಿರಾಕರಿಸಲು ಮಹಿಳೆಯರಿಗೆ ಸಲಹೆ – ಗರ್ಭಪಾತ ಕಾನೂನು ಜಾರಿಗೆ ಆಕ್ರೋಶ
ಇನ್ನೊಂದೆಡೆ, ಮಹಾರಾಷ್ಟ್ರ ಬಿಜೆಪಿ ಘಟಕದ ಕಾನೂನು ವಿಭಾಗದ ಸಲಹೆಗಾರ ಅಶುತೋಷ್ ದುಬೆ ಅವರು ಅಖ್ತರ್ ವಿರುದ್ಧ ಮುಂಬೈ ಪೊಲೀಸರಿಗೆ ದೂರನ್ನು ಕೊಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಆರ್‍ಎಸ್‍ಎಸ್ ಹೆಸರನ್ನು ಕೆಡಿಸಲು ಅಖ್ತರ್ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂಬೈನ ಘಾಟ್ಕೋಪರ್ ಪಶ್ಚಿಮ ವಿಧಾನಸಭೆ ಕ್ಷೇತ್ರವನ್ನು ರಾಮ್ ಕದಮ್ ಪ್ರತಿನಿಧಿಸುತ್ತಾರೆ. ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ದಹಿ ಹಂಡಿ ಉತ್ಸವದಲ್ಲಿ ಜನಜಂಗುಳಿ ಸೇರದಂತೆ ಕೈಗೊಂಡಿದ್ದ ಮುನ್ನೆಚ್ಚರಿಕೆ ನಿಯಮವನ್ನು ಉಲ್ಲಂಘಿಸುವ ಘೋಷಣೆಯನ್ನು ಇತ್ತೀಚೆಗೆ ಕದಮ್ ಮಾಡಿದ್ದರು. ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ಕದಮ್ ನಿವಾಸಕ್ಕೆ ಮುಂಬೈ ಪೊಲೀಸ್ ಸಿಬ್ಬಂದಿ ಭೇಟಿ ಕೊಟ್ಟಿದ್ದು ಭಾರಿ ಸುದ್ದಿಯಾಗಿತ್ತು.