ಒಲಂಪಿಕ್ಸ್ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಆಗುತ್ತಿದೆ.
ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಗೆದ್ದ ಇನ್ನೂ ಆರು ಮಂದಿಗೂ ಸಹ ಬಹಳಷ್ಟು ಉಡುಗೊರೆಗಳನ್ನು ಸರ್ಕಾರಗಳು ಹಾಗೂ ಸಂಸ್ಥೆಗಳು ಘೋಷಿಸಿವೆ. ಇದೇ ವೇಳೆ ದಿಢೀರ್ ಎಂದು ಇಷ್ಟೆಲ್ಲಾ ಹಣ ಬಂದು ಸೇರುತ್ತಿರುವಾಗ ಈ ಅಥ್ಲೀಟ್ಗಳಿಗೆ ತೆರಿಗೆ ಅನ್ವಯವಾಗುವುದಿಲ್ಲವೇ ಎಂಬೆಲ್ಲಾ ಪ್ರಶ್ನೆಗಳು ಎದ್ದಿವೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(17ಎ) ಪ್ರಕಾರ, ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಡುವ ಕೆಲವೊಂದು ಬಹುಮಾನಗಳನ್ನು ತೆರಿಗೆ ಮುಕ್ತ ಎಂದು ಘೋಷಿಸುವ ಆಯ್ಕೆ ಸಿಬಿಡಿಟಿಗೆ ಇದೆ.
BIG NEWS: ಎಲ್ಲ ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ; ಹೊಸ ನಂಬರ್ ಪ್ಲೇಟ್ ಕಡ್ಡಾಯ
28-01-2014ರಲ್ಲಿ ಹೊರಡಿಸಿದ ಆದೇಶವೊಂದರ ಮೂಲಕ ಒಲಿಂಪಿಕ್ಸ್, ಕಾಮನ್ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟಲ್ಲಿ ಪದಕ ಗೆಲ್ಲುವ ಅಥ್ಲೀಟ್ಗಳಿಗೆ ನೀಡಲಾಗುವ ಬಹುಮಾನ ರೂಪದ ನಗದು ಹಾಗೂ ಇತರೆ ಉಡುಗೊರೆಗಳನ್ನು ತೆರಿಗೆಮುಕ್ತ ಎಂದು ಸಿಬಿಡಿಟಿ ಘೋಷಿಸಿದೆ.
ಆದರೆ ಮೇಲ್ಕಂಡ ಕಾಯಿದೆ ಹಾಗೂ ಸಿಬಿಡಿಟಿಯ ಆದೇಶಗಳು ಸ್ಥಳೀಯಾಡಳಿತ, ಕ್ರೀಡಾ ಮಂಡಗಳಿಗಳು ಹಾಗೂ ಖಾಸಗಿ ಸಂಸ್ಥೆಗಳು ಕೊಡುವ ಪುರಸ್ಕಾರಗಳಿಗೆ ಅನ್ವಯವಾಗುವುದಿಲ್ಲ.
ಹೀಗಾಗಿ ಆನಂದ್ ಮಹಿಂದ್ರಾರಿಂದ ತಮಗೆ ಘೋಷಿತವಾದ ಎಕ್ಸ್ಯುವಿ700 ಎಸ್ಯುವಿಯನ್ನು ತಮ್ಮದಾಗಿಸಿಕೊಳ್ಳಲು ನೀರಜ್ ಚೋಪ್ರಾ ಕಾರಿನ ಮೌಲ್ಯದ 30%ನಷ್ಟನ್ನು ತೆರಿಗೆ ರೂಪದಲ್ಲಿ ಭರಿಸಬೇಕಾಗಿ ಬರಬಹುದು.
ಇಂಥ ಸಂದರ್ಭದಲ್ಲಿ ಬಹುಮಾನ ಘೋಷಿಸುವ ಮಂದಿ ಬಹುಮಾನದ ಮೌಲ್ಯದ 30%ರಷ್ಟನ್ನು ಮೂಲದಲ್ಲೇ ಕಡಿತ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಬಹುಮಾನ ಕೊಡುವ ಮಂದಿ/ಸಂಸ್ಥೆ ಧಾರಾಳಿಯಾಗಿದ್ದಲ್ಲಿ ಟಿಡಿಎಸ್ ಮೊತ್ತವನ್ನೇ ತಾವೇ ಭರಿಸಲೂಬಹುದಾಗಿದೆ.