
ಈ ನಡುವೆ ಸಾವಿರಾರು ಪ್ರತಿಭಟನಾಕಾರರು ಶೇಖ್ ಹಸೀನಾ ಅಧಿಕೃತ ನಿವಾಸ ಮತ್ತು ಆಕೆಯ ಪಕ್ಷ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಇತರ ಆಸ್ತಿಗಳಿಗೆ ಮುತ್ತಿಗೆ ಹಾಕಿದ್ದು ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿಕೊಂಡು ಹೋಗಿದ್ದಾರೆ. ಶೇಖ್ ಹಸೀನಾ ಅವರ ಅಧಿಕೃತ ನಿವಾಸವಾದ ಗೊನೊ ಭಬನ್‌ನಲ್ಲಿ ಲೂಟಿಯ ಸಂದರ್ಭದಲ್ಲಿ, ಒಬ್ಬ ವ್ಯಕ್ತಿ ಶೇಖ್ ಹಸೀನಾ ಸೀರೆಗಳನ್ನು ತುಂಬಿದ ಸೂಟ್ ಕೇಸ್ ಹೊತ್ತುಹೊಂಡು ಹೋಗಿದ್ದಾನೆ. ಈ ಬಗ್ಗೆ ಕೇಳಿದರೆ, ಸೂಟ್ ಕೇಸ್ ನಲ್ಲಿ ಶೇಖ್ ಹಸೀನಾ ಅವರ ಸೀರೆಗಳಿವೆ , ಅವುಗಳನ್ನು ತನ್ನ ಪತ್ನಿಗೆ ನೀಡಿ ಅವಳನ್ನು ಹೊಸ ಪ್ರಧಾನಿಯನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾನೆ.
ಪ್ರತಿಭಟನೆಯಿಂದ ಉದ್ವಿಗ್ನ ಸ್ಥಿತಿಯಲ್ಲಿರುವ ಬಾಂಗ್ಲಾದೇಶದಲ್ಲಿ ಲೂಟಿಕೋರರು ಪರಿಸ್ಥಿತಿಯನ್ನ ಈ ರೀತಿ ಹಾಸ್ಯಮಯವಾಗಿ ಪರಿಗಣಿಸಿದ್ದಾರೆ.
ಇಷ್ಟೇ ಅಲ್ಲದೇ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊಗಳಲ್ಲಿ ಗೊನೆ ಭಬನ್ ಗೆ ನುಗ್ಗಿದ ಪ್ರತಿಭಟನಾಕಾರರು ಪ್ರಧಾನಿಯ ಅಡುಗೆಮನೆಯಲ್ಲಿ ಮೀನು ಮತ್ತು ಬಿರಿಯಾನಿ ತಿನ್ನುತ್ತಿರುವುದನ್ನು ತೋರಿಸಿವೆ. ಇತರರು ಶೇಖ್ ಹಸೀನಾ ಅವರ ಹಾಸಿಗೆಯ ಮೇಲೆ ಮಲಗಿದ್ದಾರೆ. ಕೆಲವರು ಟಿವಿ, ಕುರ್ಚಿಗಳು, ಟೇಬಲ್‌ಗಳಂತಹ ವಸ್ತುಗಳನ್ನು ಕದಿಯುತ್ತಿದ್ದರು. ಕೆಲವು ಪ್ರತಿಭಟನಾಕಾರರು ಸೀರೆಗಳು ಮತ್ತು ಬ್ಲೌಸ್‌ಗಳನ್ನು ಕದ್ದೊಯ್ದರು .