![](https://kannadadunia.com/wp-content/uploads/2023/06/priyank-kharge1654339617.jpg)
ಬೆಂಗಳೂರು : ನಾನು ಬಸವ, ಸಂವಿಧಾನ, ಅಂಬೇಡ್ಕರ್ ತತ್ವ ನಂಬಿದವನು. ಯಾರಾದರೂ ಕರೆದರೆ ಅಯೋಧ್ಯೆಗೆ ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರದ ಬಗ್ಗೆ ನಾವು ಎಲ್ಲಿ ಪ್ರಶ್ನೆ ಮಾಡಿದ್ದೇವೆ. ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಏಕೆ ಮಾಡಿದ್ದಾರೆ. ಸಾಧು ಸಂತರು ಕೇಳಿದ್ದಾರೆ. ನಾವು ಕೇಳಿದ್ದಲ್ಲ ಎಂದರು.
ನಾನು ಯಾವ ದೇವಾಲಯಕ್ಕೂ ಹೋಗುವುದಿಲ್ಲ. ಯಾರಾದ್ರೂ ಬನ್ನಿ ಅಂದ್ರೆ ಬರುತ್ತೇನೆ. ಯಾರಾದ್ರೂ ಕರೆದುಕೊಂಡು ಹೋದರೆ ಅಯೋಧ್ಯೆಗೆ ಹೋಗುತ್ತೇನೆ. ಕಲಿಯಲು ಹೋದರೆ ತಪ್ಪೇನು? ನಾನು ಜನತಾ ಜನತಾ ಜನಾರ್ಧನನ ಭಕ್ತ, ನಾನು ಬಸವ, ಸಂವಿಧಾನ, ಅಂಬೇಡ್ಕರ್ ತತ್ವ ಪಾಲಿಸುವವನು. ನನಗೆ ಭಕ್ತಿ ಇಲ್ಲ. ಏನು ಮಾಡಲಿ ಎಂದು ಹೇಳಿದ್ದಾರೆ.