ವರ್ಚುವಲ್ ಡಿಜಿಟಲ್ ಅಸೆಟ್ (ವಿಡಿಎ) ಮತ್ತು 10,000 ರೂ.ಗಿಂತ ಹೆಚ್ಚಿನ ವಹಿವಾಟಿಗೆ ಕ್ರಿಪ್ಟೋಕರೆನ್ಸಿ ಮೇಲೆ ಟಿಡಿಎಸ್ (ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ) ಹಾಕುವ ಹೊಸ ನಿಯಮ ಜುಲೈ 1ರಿಂದ ಜಾರಿಗೆ ಬಂದಿವೆ.
ಹೂಡಿಕೆದಾರರು ಇನ್ನುಮುಂದೆ 10,000 ರೂ.ಕ್ಕಿಂತ ಹೆಚ್ಚಿನ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಯ ಮೇಲೆ ಶೇಕಡಾ 1 ಟಿಡಿಎಸ್ ಪಾವತಿಸಬೇಕಾಗುತ್ತದೆ.
ಕೊಡುಗೆ ಮತ್ತು ವರ್ಚುವಲ್ ಡಿಜಿಟಲ್ ಆಸ್ತಿಗಳಿಗೆ ಸಂಬಂಧಿಸಿದ ಎರಡು ಕಾನೂನು ತಿದ್ದುಪಡಿಗಳನ್ನು ಜಾರಿಗೊಳಿಸಲಾಗಿದೆ. ಎರಡೂ ನಿಯಮಗಳು ಜುಲೈ 1ರಿಂದ ಜಾರಿಗೆ ಬಂದಿದೆ.
15 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ‘ಭ್ರಷ್ಟಾಚಾರ’ ಪ್ರಕರಣದಲ್ಲಿ ನಿವೃತ್ತ SP ಗೆ ಒಂದು ಕೋಟಿ ರೂ. ದಂಡ – 4 ವರ್ಷ ಜೈಲು
ಗಿಫ್ಟ್ ಕಾರ್ಡ್‌ಗಳು ಮತ್ತು ಮೈಲೇಜ್ ಪಾಯಿಂಟ್‌ಗಳನ್ನು ವಿಡಿಎಗಳಾಗಿ ವರ್ಗೀಕರಿಸಲಾಗುತ್ತದೆಯೇ ಎಂಬುದರ ಕುರಿತು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇದೀಗ ಸ್ಪಷ್ಟನೆ ನೀಡಿದೆ.
ತಡವಾಗಿ ಹೊರಡಿಸಲಾದ ಅಧಿಸೂಚನೆಯಲ್ಲಿರುವಂತೆ ಗಿಫ್ಟ್ ಕಾರ್ಡ್‌ಗಳು, ಮೈಲೇಜ್ ಪಾಯಿಂಟ್‌ಗಳು, ರಿವಾರ್ಡ್ ಪಾಯಿಂಟ್‌ಗಳು ಮತ್ತು ಲಾಯಲ್ಟಿ ಕಾರ್ಡ್‌ಗಳು ವಿಡಿಎಗಳ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂದು ಸಿಡಿಬಿಟಿ ಸ್ಪಷ್ಟಪಡಿಸಲಾಗಿದೆ.
ಅಂತಹ ಅಸೆಟ್ ಖರೀದಿದಾರರು ಅಥವಾ ಮಾರಾಟಗಾರರು ವಿಡಿಎ ವಹಿವಾಟುಗಳಿಗೆ ಟಿಡಿಎಸ್ ಪಾವತಿಸಬೇಕಾಗಿಲ್ಲ.