
ಭಾರತದ ಬ್ಯಾಂಕ್‌ಗಳು ಏಪ್ರಿಲ್ 2025 ರಿಂದ ವಾರದಲ್ಲಿ ಕೇವಲ 5 ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಮಾಧ್ಯಮವೊಂದು ಸುದ್ದಿ ಪ್ರಸಾರ ಮಾಡಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ನಿಯಮ ಜಾರಿ ಮಾಡಿದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. ಇದರಿಂದ ಗ್ರಾಹಕರು ಮತ್ತು ಉದ್ಯೋಗಿಗಳು ಆಶ್ಚರ್ಯಚಕಿತರಾಗಿದ್ದರು.
ಆದರೆ, ಈ ಸುದ್ದಿ ಸುಳ್ಳು ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಖಚಿತಪಡಿಸಿದೆ. ʼಲೋಕಮತ್ ಟೈಮ್ಸ್ʼ ಪ್ರಸಾರ ಮಾಡಿದ ಸುದ್ದಿ ಸುಳ್ಳು ಎಂದು ಪಿಐಬಿ ತಿಳಿಸಿದೆ. ಆರ್‌ಬಿಐಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಆರ್‌ಬಿಐ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಪಿಐಬಿ ಫ್ಯಾಕ್ಟ್‌ಚೆಕ್ ಹೇಳಿದೆ.
ಲೋಕಮತ್ ಟೈಮ್ಸ್ ವರದಿಯ ಪ್ರಕಾರ, ಆರ್‌ಬಿಐ ಜಾರಿ ಮಾಡಿದ ಹೊಸ ನಿಯಮದ ಅನ್ವಯ ಬ್ಯಾಂಕ್‌ಗಳು ವಾರದಲ್ಲಿ ಕೇವಲ 5 ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ. ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಸರ್ಕಾರಿ ಕಚೇರಿಗಳ ಮಾದರಿಯಲ್ಲಿ ಏಪ್ರಿಲ್ 2025 ರಿಂದ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು.
ಆದರೆ, ಬ್ಯಾಂಕ್‌ಗಳಿಗೆ ವಾರದಲ್ಲಿ 5 ದಿನ ಕೆಲಸದ ಬಗ್ಗೆ ಆರ್‌ಬಿಐ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ. ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಭಾನುವಾರ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಬ್ಯಾಂಕ್‌ಗಳಿಗೆ ವಾರದಲ್ಲಿ 5 ದಿನ ಕೆಲಸದ ಬಗ್ಗೆ ಆರ್‌ಬಿಐ ಮತ್ತು ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ (ಐಬಿಎ) ನಡುವೆ ಚರ್ಚೆಗಳು ನಡೆಯುತ್ತಿವೆ. ಉದ್ಯೋಗಿಗಳ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಸಮತೋಲನಕ್ಕಾಗಿ ಬ್ಯಾಂಕಿಂಗ್ ಒಕ್ಕೂಟಗಳು ವಾರದಲ್ಲಿ 5 ದಿನ ಕೆಲಸದ ಪ್ರಸ್ತಾಪವನ್ನು ಮುಂದಿಟ್ಟಿವೆ.
A news report by Lokmat Times claims that starting from April, banks across the country would operate 5 days a week, following a new regulation issued by @RBI #PIBFactCheck
▶️This claim is #Fake
▶️For official information related with Reserve Bank of India, visit :… pic.twitter.com/MrZHhMQ0dK
— PIB Fact Check (@PIBFactCheck) March 20, 2025