alex Certify ಸಮುದ್ರದಲ್ಲಿ ಮುಳುಗಿ ಹೋಗಲಿದೆಯಾ ಬ್ಯಾಂಕಾಕ್ ? ಹೊಸ ರಾಜಧಾನಿಯ ಹುಡುಕಾಟದಲ್ಲಿದೆ ಈ ದೇಶ, ಭಾರತಕ್ಕೂ ಕಾದಿದೆ ಅಪಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಲ್ಲಿ ಮುಳುಗಿ ಹೋಗಲಿದೆಯಾ ಬ್ಯಾಂಕಾಕ್ ? ಹೊಸ ರಾಜಧಾನಿಯ ಹುಡುಕಾಟದಲ್ಲಿದೆ ಈ ದೇಶ, ಭಾರತಕ್ಕೂ ಕಾದಿದೆ ಅಪಾಯ….!

ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಥೈಲ್ಯಾಂಡ್‌ ಶೀಘ್ರವೇ ತನ್ನ ರಾಜಧಾನಿಯನ್ನು ಬದಲಾಯಿಸಬೇಕಾಗಬಹುದು. ಹವಾಮಾನ ಬದಲಾವಣೆಯಿಂದಾಗಿ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್ ಸಮುದ್ರದಲ್ಲಿ ಮುಳುಗುವ ಅಪಾಯವಿದೆ. ಅಲ್ಲಿನ ಹವಾಮಾನ ಇಲಾಖೆಯ ಪ್ರಕಾರ ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ ಥೈಲ್ಯಾಂಡ್ ತನ್ನ ರಾಜಧಾನಿಯನ್ನು ಶಿಫ್ಟ್‌ ಮಾಡುವ ಸಾಧ್ಯತೆ ಇದೆ.

ಈ ಶತಮಾನದ ಅಂತ್ಯದ ವೇಳೆಗೆ ಬ್ಯಾಂಕಾಕ್‌ನ ಕರಾವಳಿ ಪ್ರದೇಶಗಳು ಸಮುದ್ರದಲ್ಲಿ ಮುಳುಗುವ ಅಪಾಯವಿದೆ ಎಂದು ಈ ಹಿಂದೆಯೇ ತಜ್ಞರು ಎಚ್ಚರಿಸಿದ್ದಾರೆ. ಬ್ಯಾಂಕಾಕ್‌ ನಗರವು ಮಳೆಗಾಲದ ದಿನಗಳಲ್ಲಿ ಭಾರೀ ಪ್ರವಾಹವನ್ನು ಎದುರಿಸಲು ಪ್ರಾರಂಭಿಸುತ್ತದೆ. ಏರುತ್ತಲೇ ಇರುವ ಭೂಮಿಯ ತಾಪಮಾನ ಕೂಡ ಇದಕ್ಕೆ ಕಾರಣ.

2050 ರ ವೇಳೆಗೆ ಮುಳುಗಿ ಹೋಗಬಹುದು ಈ ನಗರಗಳು !

ಹವಾಮಾನ ಬದಲಾವಣೆಯಿಂದಾಗಿ 2050 ರ ವೇಳೆಗೆ ವಿಶ್ವದ ಅನೇಕ ನಗರಗಳು ಮುಳುಗಬಹುದು ಎಂದು ಹೇಳಲಾಗ್ತಿದೆ. ಅಮೆರಿಕದ ಸವನ್ನಾ ಮತ್ತು ನ್ಯೂ ಓರ್ಲಿಯನ್ಸ್, ಗಿನಿಯಾದ ರಾಜಧಾನಿ ಜಾರ್ಜ್‌ಟೌನ್, ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್, ಭಾರತದ ಕೋಲ್ಕತ್ತಾ ಮತ್ತು ಮುಂಬೈ, ವಿಯೆಟ್ನಾಂನ ಹೋ ಚಿ ಮಿನ್ಹ್ ನಗರ, ಇಟಲಿಯ ವೆನಿಸ್, ಇರಾಕ್‌ನ ಬಾಸ್ರಾ, ನೆದರ್‌ಲ್ಯಾಂಡ್‌ನ ಆಮ್‌ಸ್ಟರ್‌ಡ್ಯಾಮ್‌ ನಗರಗಳು ಮುಳುಗಿ ಹೋಗುವ ಅಪಾಯದಲ್ಲಿವೆ.

ಬಹಳಷ್ಟು ಇಂಗಾಲವು ನೆಲದೊಳಗೆ ವಿವಿಧ ರೂಪಗಳಲ್ಲಿ ಇರುತ್ತದೆ. ಈ ಕಾರ್ಬನ್ ಲಕ್ಷಾಂತರ ವರ್ಷಗಳಿಂದ ಭೂಮಿಯಲ್ಲಿದೆ. ಇದು ಪೆಟ್ರೋಲಿಯಂ, ಅನಿಲ ಅಥವಾ ಕಲ್ಲಿದ್ದಲಿನ ರೂಪದಲ್ಲಿರುತ್ತದೆ. ಭೂಮಿಯಿಂದ ಹೊರಬಂದ ತಕ್ಷಣ ವಾತಾವರಣದಲ್ಲಿ ಶಾಖ ಹರಡಲು ಇದು ಪ್ರಾರಂಭಿಸಿದ್ದರಿಂದ ಹಿಮನದಿಗಳು ಅಥವಾ ಮಂಜುಗಡ್ಡೆಗಳು ಕರಗುತ್ತಿವೆ.

ಭೂಮಿಯಲ್ಲಿ ಕಾರ್ಬನ್ ಇರುವವರೆಗೆ, ಹಿಮನದಿಗಳು ಮತ್ತು ಧ್ರುವಗಳು ಸಹ ತಂಪಾಗಿರುತ್ತವೆ. ಆದರೆ ಕಾರ್ಬನ್ ಹೊರಬಂದಾಗ ಹಿಮನದಿಗಳು ಮತ್ತು ಧ್ರುವಗಳ ಐಸ್ ಕರಗಲು ಪ್ರಾರಂಭಿಸಿತು. ತನ್ನನ್ನು ರಕ್ಷಿಸಿಕೊಳ್ಳಲು ಭೂಮಿ, ತಾಪಮಾನ ನಿಯಂತ್ರಣಕ್ಕೆ ನೀರನ್ನು ಹೆಚ್ಚಿಸಲು ಪ್ರಾರಂಭಿಸಿತು. ಇದರಿಂದಾಗಿಯೇ ಕರಾವಳಿ ನಗರಗಳು ಮುಳುಗುವ ಅಪಾಯ ಹೆಚ್ಚಾಗಿದೆ. ಇದೇ ಕಾರಣದಿಂದ ಭಾರತದ ಮಜುಲಿ ದ್ವೀಪವೂ ಮುಳುಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...