ಮನುಷ್ಯರು ಎಷ್ಟೇ ವಿಭಿನ್ನವಾಗಿದ್ರು ಹಲವು ಪ್ರಾಣಿಗಳು ಅವರಿಂದ ಏನೂ ನಿರೀಕ್ಷಿಸದೆೆ ಹತ್ತಿರವಾಗಿಬಿಡುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ, ಇಲ್ಲೊಂದು ಎಲಿಫ್ಯಾಂಟ್ ಸೀಲ್, ವೈಲ್ಡ್‌ಲೈಫ್ ಛಾಯಾಗ್ರಾಹಕರನ್ನ ಅಪ್ಪಿಕೊಂಡಿದೆ. ದಕ್ಷಿಣ ಜಾರ್ಜಿಯಾದಲ್ಲಿ ಈ ಘಟನೆ ನಡೆದಿದ್ದು, ಸುಮಾರು 90 ಕೆಜಿ ತೂಕದ ಎಲಿಫ್ಯಾಂಟ್ ಸೀಲ್ ಜೆಸ್ ಎನ್ನುವ ಫೋಟೋಗ್ರಾಫರ್ ಅನ್ನು ಅಪ್ಪಕೊಂಡಿದೆ.
ಜೆಸ್ ಟೌಂಟನ್ ತನ್ನ ಪತಿ ಕ್ರಿಸ್ ಬ್ರೇ ಅವರೊಂದಿಗೆ ಅಟ್ಲಾಂಟಿಕ್ ದ್ವೀಪದ ದಕ್ಷಿಣದಲ್ಲಿರುವ ಗೋಲ್ಡ್ ಹಾರ್ಬರ್‌ಗೆ ತಮ್ಮ ಪ್ರಾಜೆಕ್ಟ್ ಗಾಗಿ ಯಾತ್ರೆ ಕೈಗೊಂಡಿದ್ದರು. ಆ ವೇಳೆ ಘಟನೆ ನಡೆದಿದ್ದು, ಸೀಲ್ ಹಾಗೂ ಜೆಸ್ ಅವ್ರ ಸಿಕ್ಕಾಪಟ್ಟೆ ಕ್ಯೂಟ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗ್ತಿದೆ.
ಎಲಿಫ್ಯಾಂಟ್ ಸೀಲ್ ಮರಿ ಜೆಸ್ ಅವ್ರನ್ನ ಮುದ್ದಾಡಿ ಅಪ್ಪಿಕೊಂಡಿದೆ. ಜೆಸ್ ಮತ್ತು ಕ್ರಿಸ್ ಪೆಂಗ್ವಿನ್‌ಗಳ ಗುಂಪನ್ನು ಕಂಡಿದ್ದಾರೆ. ಜೆಸ್ಸ್ ಪೆಂಗ್ವಿನ್‌ಗಳ ಛಾಯಾಚಿತ್ರ ಕ್ಲಿಕ್ ಮಾಡಲು ಕೆಳಗೆ ಬಾಗಿದಾಗ, ಎಲಿಫ್ಯಾಂಟ್ ಸೀಲ್ ಮರಿಗಳ ಗುಂಪು ದಂಪತಿಗಳ ಬಳಿಗೆ ಬಂದಿತು. ಅದರಲ್ಲಿ ಒಂದು ಸೀಲ್ ಗುಂಪಿನಿಂದ ಬೇರ್ಪಟ್ಟು ಜೆಸ್‌ಗೆ ಹತ್ತಿರವಾಯಿತು. ಆ ಬೇಬಿ ಸೀಲ್ ತನ್ನ ಸಂಪೂರ್ಣ ದೇಹದ ತೂಕವನ್ನು ಜೆಸ್ಸ್ ಮೇಲೆ ಹಾಕಿ ಆಕೆಗೆ ಅಪ್ಪುಗೆಯನ್ನು ನೀಡಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ.
ಜೆಸ್ಸ್ ಪತಿ ಕ್ರಿಸ್ಸ್ ಇಡೀ ಘಟನೆಯನ್ನ ನಗುನಗುತ್ತಲೆ ರೆಕಾರ್ಡ್ ಮಾಡಿದ್ದಾರೆ. ಗುಂಪಿನಲ್ಲಿದ್ದ ಮತ್ತೆರಡು ಮರಿಗಳು ಸಹ ಜೆಸ್ಸ್ ಅನ್ನು ಸಮೀಪಿಸಿದ್ದನ್ನ ವಿಡಿಯೋದಲ್ಲಿ ಕಾಣಬಹುದು. ಈ ವೀಡಿಯೋವನ್ನ ವಾಸ್ತವವಾಗಿ ಡಿಸೆಂಬರ್ 2018 ರಲ್ಲಿ ಚಿತ್ರಿಸಲಾಗಿದೆ. ಆದರೆ ಇತ್ತೀಚಿಗೆ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಖತ್ ವೈರಲ್ ಆಗಿದೆ.