ಅಲ್ಜಿಯರ್ಸ್: ಅಲ್ಜೀರಿಯಾದಲ್ಲಿ ಭಾರಿ ಕಾಡ್ಗಿಚ್ಚು ಉಂಟಾಗಿದೆ. 25 ಸೈನಿಕರ ಸೇರಿದಂತೆ 40ಕ್ಕೂ ಅಧಿಕ ಮಂದಿ ಸಜೀವ ದಹನವಾಗಿದ್ದಾರೆ.
ಆಲ್ಜೀರಿಯಾ ರಾಜಧಾನಿಯ ಪೂರ್ವಭಾಗದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಬೈಲ್ ಪ್ರದೇಶವೂ ಸೇರಿದಂತೆ ಹಲವು ಕಡೆಗಳಲ್ಲಿ ಒಮ್ಮೆಲೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಸೇನೆಯನ್ನು ರವಾನಿಸಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪರ್ವತ ಪ್ರದೇಶಕ್ಕೆ ಹೊಂದಿಕೊಂಡ ಜನವಸತಿ ಪ್ರದೇಶಗಳಲ್ಲಿ ಬೆಂಕಿ ಆವರಿಸಿದ್ದು, ಜನರನ್ನು ಸ್ಥಳಾಂತರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜಾನುವಾರು ಮತ್ತು ಪ್ರಾಣಿ, ಪಕ್ಷಿಗಳು ಬೆಂಕಿಯಲ್ಲಿ ಬೆಂದು ಹೋಗಿವೆ.
ಪ್ರಧಾನಿ ಆಯ್ಮಾನ್ ಬೆನಾಬ್ದೆರ್ ರೆಹಮಾನ್, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಆಲ್ಜೀರಿಯಾ ಸರ್ಕಾರ ಅಂತರರಾಷ್ಟ್ರೀಯ ಸಮುದಾಯದ ನೆರವು ಕೋರಿದ್ದು, ಕಾಡ್ಗಿಚ್ಚು ನಂದಿಸಲು ವಿಮಾನಗಳನ್ನು ಬಾಡಿಗೆ ಪಡೆಯಲಾಗಿದೆ. ಜನರ ನೆರವಿನೊಂದಿಗೆ ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ಮುಂದುವರೆಸಿದ್ದಾರೆ.