ಆಹಾರ ಅರಸಿಕೊಂಡು ಬಂದಿದ್ದ ಮಂಗವೊಂದು ನಾಯಿಮರಿಯನ್ನು ಎತ್ತಿಕೊಂಡು ಓಡಿದ್ದ ಅಪರೂಪದ ಘಟನೆಯೊಂದು ನಡೆದಿದೆ. ಮೂರು ದಿನಗಳ ಕಾಲ ನಾಯಿಮರಿಯನ್ನು ತನ್ನ ಮಗುವಿನಂತೆ ತಬ್ಬಿ ಹಿಡಿದುಕೊಂಡಿತ್ತು. ಕೊನೆಗೆ ಗ್ರಾಮಸ್ಥರ ಹರಸಾಹಸದಿಂದ ನಾಯಿಮರಿಗೆ ಬಿಡುಗಡೆಯ ಮುಕ್ತಿ ದೊರೆತಿದೆ.
ಹೌದು, ಮಲೇಷ್ಯಾದ ತಮನ್ ಲೆಸ್ತಾರಿಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.
BIG NEWS: 2023ರ ಚುನಾವಣೆ; ಬಿಜೆಪಿ 130-140 ಸ್ಥಾನ ಗೆಲ್ಲುವ ವಿಶ್ವಾಸ ಎಂದ ಸಚಿವ ಆರ್. ಅಶೋಕ್
ಸೆಪ್ಟೆಂಬರ್ 16ರಂದು ಕೋತಿ 2 ವಾರಗಳ ಪುಟ್ಟ ನಾಯಿಮರಿಯನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಸರಸರನೇ ಮರವನ್ನೇರಿದೆ. ಇದನ್ನು ನೋಡಿದ ಸ್ಥಳೀಯರು ನಾಯಿಮರಿಯನ್ನು ರಕ್ಷಿಸಲು ಪ್ರಯಾಸಪಟ್ಟಿದ್ದಾರೆ. ಕೋತಿ ನಾಯಿಮರಿಯನ್ನು ತನ್ನ ಮಗುವಿನಂತೆ ನೋಡಿಕೊಂಡಿದೆ. ಅದಕ್ಕೇನು ಅಪಾಯ ಮಾಡಿಲ್ಲ. ಆದರೆ 3 ದಿನವಾದ್ರೂ ನಾಯಿಮರಿಯನ್ನು ಕೋತಿ ಬಿಡದೆ ಇದ್ದಿದ್ದರಿಂದ ನಾಯಿಮರಿಯು ದಣಿದಂತೆ ಭಾಸವಾಗಿತ್ತು ಅಂತಾ ಸ್ಥಳೀಯರು ಹೇಳಿದ್ದಾರೆ.
ಕೊನೆಗೆ ಕೋತಿಗೆ ಕಲ್ಲುಗಳನ್ನು ಎಸೆದಾಗ, ನಾಯಿಮರಿ ಕೆಳಗೆ ಬಿದ್ದಿದೆ. ಕೂಡಲೇ ಅಲ್ಲಿದ್ದ ಜನರು ನಾಯಿಮರಿಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಕೋತಿಯಾಗಲಿ, ಜನರಿಗಾಗಲಿ ಯಾವುದೇ ಗಾಯಗಳಾಗಿಲ್ಲ. ನಾಯಿಮರಿಗೆ ಅಲ್ಲಿನ ನಿವಾಸಿಯೊಬ್ಬರು ಆರೈಕೆ ಮಾಡಿದ್ದಾರೆ.