alex Certify ಅಪರೂಪದ ಫಿಶಿಂಗ್ ಕ್ಯಾಟ್ ಪ್ರತ್ಯಕ್ಷ, ಹುಲಿ ಬಂದಿದೆ ಎಂದು ಪರಾರಿಯಾದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಫಿಶಿಂಗ್ ಕ್ಯಾಟ್ ಪ್ರತ್ಯಕ್ಷ, ಹುಲಿ ಬಂದಿದೆ ಎಂದು ಪರಾರಿಯಾದ ಜನ…!

ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿರುವ ಅಪರೂಪದ ವೈಲ್ಡ್ ಫಿಶಿಂಗ್ ಕ್ಯಾಟ್ ಪಶ್ಚಿಮ ಬಂಗಾಳದ ಹವ್ರಾದಲ್ಲಿ ಪ್ರತ್ಯಕ್ಷವಾಗಿದೆ. ದೊಂಜುರ್ ಬ್ಲಾಕ್‍ನ ಸರ್ದಾರ ಪಾರಾದಲ್ಲಿ ದೈತ್ಯ ಕಾಡುಬೆಕ್ಕು ಕಾಣಿಸಿಕೊಂಡಿದೆ. ಗಾಬರಿಗೊಂಡ ಜನರು, ಹುಲಿ ಬಂದಿದೆ ಎಂದು ಕೂಗಿಕೊಂಡು ಸುರಕ್ಷಿತ ಸ್ಥಳಗಳಿಗೆ ಪರಾರಿಯಾಗಿದ್ದಾರೆ. ಸ್ಥಳೀಯ ಮಾಧ್ಯಮಗಳು ಕೂಡ ಕೂಲಂಕಷವಾಗಿ ಪರಿಶೀಲಿಸದೆಯೇ, ಕೇವಲ ಜನರ ಅಭಿಪ್ರಾಯ ಸಂಗ್ರಹಿಸಿ ಹವ್ರಾದಲ್ಲಿ ಹುಲಿ ಪ್ರತ್ಯಕ್ಷ ಎಂದು ಸುದ್ದಿ ಮಾಡಿವೆ.

BREAKING: Tokyo Paralympics; ಭಾರತಕ್ಕೆ ಮತ್ತೊಂದು ಚಿನ್ನ – ಷಟ್ಲರ್ ಕೃಷ್ಣ ನಗರ್ ಗೆ ಚಿನ್ನದ ಪದಕ

ಬಳಿಕ ಸ್ಥಳಕ್ಕೆ ಆಗಮಿಸಿದ ಆ ಪ್ರದೇಶದ ಅರಣ್ಯ ವಿಭಾಗದ ಅಧಿಕಾರಿಗಳು, ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಹುಲಿಯ ಬದಲು ಕಾಡುಬೆಕ್ಕು ಕಂಡುಬಂದಿದೆ. ಇನ್ನೂ ಹುಚ್ಚಾಟವೆಂದರೆ, ಆನ್‍ಲೈನ್ ನ್ಯೂಸ್‍ಗಳಲ್ಲಿ ಹುಲಿ ಪ್ರತ್ಯಕ್ಷವಾಗಿರುವ ಸುದ್ದಿ ಕಂಡು, ಸ್ಥಳೀಯರು ಕೈಗೆ ಸಿಕ್ಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಹುಲಿ ಬೇಟೆಗೆ ಮುಂದಾಗಿದ್ದಾರೆ. ಕೊನೆಗೆ ಹವ್ರಾ ನಗರದ ಅರಣ್ಯ ವಿಭಾಗದ ರೇಂಜ್ ಅಧಿಕಾರಿ ನಿರ್ಮಲ್ ಮಂಡಲ್ ಅವರು ಜನರಿಗೆ ಬೆಕ್ಕಿನ ವಿಚಾರ ತಿಳಿಸಿ, ಆತಂಕ ದೂರ ಮಾಡಿದ್ದಾರೆ.

ಪುರಾವೆಯಾಗಿ ಬೆಕ್ಕಿನ ಕಾಲಿನ ಹೆಜ್ಜೆಗುರುತುಗಳನ್ನು ಕೂಡ ಜನರಿಗೆ ತೋರಿಸಿದ್ದಾರೆ. ಹೆಗ್ಗಣಗಳು, ಕೋಳಿಗಳನ್ನು ಮಾತ್ರವೇ ಈ ಕಾಡುಬೆಕ್ಕು ಬೇಟೆ ಆಡುತ್ತದೆ, ಜನರನ್ನು ಕಂಡರೆ ಹೆದರಿಕೆ ಇದೆ. ಹಾಗಾಗಿ ಹತ್ತಿರ ಬರಲ್ಲ ಎಂದು ಮನವರಿಕೆ ಮಾಡಿದ ಮೇಲೆ ಜನರು ನಿರಾಳರಾಗಿ ತಮ್ಮ ಕೆಲಸಗಳ ಕಡೆಗೆ ನಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...