alex Certify ಕಾಡು ಹಂದಿ ಉಪದ್ರವಿ ಪ್ರಾಣಿ ಎಂದು ಘೋಷಣೆ ಇಲ್ಲ: ಕೇರಳದ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡು ಹಂದಿ ಉಪದ್ರವಿ ಪ್ರಾಣಿ ಎಂದು ಘೋಷಣೆ ಇಲ್ಲ: ಕೇರಳದ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕಾಡುಹಂದಿ ‘ಉಪದ್ರವಿ ಪ್ರಾಣಿ’ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೇರಳ ರಾಜ್ಯ ಸರ್ಕಾರದಿಂದ ಈ ಕುರಿತಂತೆ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ನಿರಾಕರಿಸಿದೆ.

ಕೇರಳದಲ್ಲಿ ಕಾಡುಹಂದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡುಹಂದಿಗಳ ದಾಳಿಯಿಂದ ಬೆಳೆಹಾನಿಯಾಗಿದೆ. ರೈತರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಕಾಡುಹಂದಿಯನ್ನು ಉಪದ್ರವಕಾರಿ ಪ್ರಾಣಿ ಎಂದು ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ಕೇರಳ ಮನವಿ ಮಾಡಿದೆ. ಆದರೆ, ಕೇರಳದ ಮನವಿಯನ್ನು ಕೇಂದ್ರ ಪರಿಸರ ಸಚಿವಾಲಯ ನಿರಾಕರಿಸಿದೆ. ಇದರಿಂದ ಪ್ರಾಣಿ ಕೊಲ್ಲುವ ಜನರಿಗೆ ಅವಕಾಶ ನೀಡಿದಂತಾಗುತ್ತದೆ. ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.

ಕಾಡುಹಂದಿಗಳನ್ನು ಉಪದ್ರವಿ ಪ್ರಾಣಿ ಎಂದು ಘೋಷಿಸುವುದಿಲ್ಲ ಎಂದು ಕೇರಳದ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದೆ.

ಕೃಷಿ ಮತ್ತು ಜನಜೀವನಕ್ಕೆ ಅಪಾಯಕಾರಿಯಾಗಿರುವ ಕಾಡುಹಂದಿಯನ್ನು ಉಪದ್ರವಕಾರಿ ಪ್ರಾಣಿ ಎಂದು ಘೋಷಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದೆ. ಸಾಮಾನ್ಯ ರೈತರಿಗೆ ಕಾಡುಹಂದಿಗಳನ್ನು ಹೊಡೆದುರುಳಿಸಲು ಅವಕಾಶ ನೀಡಬೇಕು ಎಂದು ಕೇರಳ ಮನವಿ ಮಾಡಿದ್ದು, ಆದರೆ, ಈ ನಿಟ್ಟಿನಲ್ಲಿ ಅನುಮತಿ ನೀಡಿದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿ 10,335 ಬೆಳೆ ಹಾನಿ ಪ್ರಕರಣ ವರದಿಯಾಗಿವೆ. ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಪರಿಹಾರಕ್ಕೆ 5.54 ಕೋಟಿ ರೂ. ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...