ಲಕ್ನೋದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಉದ್ಯಮಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ನಿಖಿಲ್ ಶವ ಮನೆಯಲ್ಲಿ ಪತ್ತೆಯಾಗಿದೆ. ನಿಖಿಲ್, ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಿಖಿಲ್ ಪತ್ರದಲ್ಲಿ, ಪತ್ನಿ ಅಂಜು ಮತ್ತು ಆಕೆ ಮಹಿಳಾ ಬಾಸ್ ಇಬ್ಬರೂ ಕಿರುಕುಳ ನೀಡುತ್ತಿದ್ದರು ಎಂದು ಬರೆದಿದ್ದಾನೆ. ಮೃತನ ಪತ್ನಿ ಅಂಜು ಗುಪ್ತಾ, ಮಹಿಳಾ ಮುಖ್ಯಸ್ಥೆ ಶಶಿ ಕಿರಣ್ ಮತ್ತು ಆಕೆಯ ಪತಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
OMG: 70 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ದೆ…!
ನಿಖಿಲ್ 2012 ರಲ್ಲಿ ಮಾರ್ಟಿನ್ ಪುರ್ವಾ ನಿವಾಸಿ ಅಂಜು ಗುಪ್ತಾಳನ್ನು ವಿವಾಹವಾಗಿದ್ದ. ನಿಖಿಲ್ ದಿನಸಿ ಅಂಗಡಿ ನಡೆಸುತ್ತಿದ್ದ. ಪತ್ನಿ ಅಂಜು ಎನ್ ಜಿಒದಲ್ಲಿ ಕೆಲಸ ಮಾಡುತ್ತಿದ್ದಾಳೆ. ಸದಾ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಶನಿವಾರ ಅಂಜು ಮನೆ ಬಿಟ್ಟು, ಬಾಸ್ ಮನೆಗೆ ಹೋಗಿ ವಾಸಿಸಲು ಶುರು ಮಾಡಿದ್ದಳು.
ಇದು ಪತಿ-ಪತ್ನಿ ವಿರುದ್ಧ ಗಲಾಟೆಗೆ ಕಾರಣವಾಗಿತ್ತು. ಕುಟುಂಬಸ್ಥರು ಸಮಾಧಾನ ಮಾಡುವ ಪ್ರಯತ್ನ ನಡೆಸಿದ್ದರು. ಪೊಲೀಸರ ಮಧ್ಯೆ ಪ್ರವೇಶವೂ ಆಗಿತ್ತು. ಆದ್ರೆ ಯಾವುದಕ್ಕೂ ಅಂಜು ಒಪ್ಪಿರಲಿಲ್ಲ. ಮೃತ ನಿಖಿಲ್ ತಂದೆ ಕೃಷ್ಣ ಕುಮಾರ್, ಲಕ್ನೋದಲ್ಲಿ ಟೈಪ್ ರೈಟರ್ ಬಾಬಾ ಎಂದು ಪ್ರಸಿದ್ಧರಾಗಿದ್ದಾರೆ.