ವಿವಾಹದಲ್ಲಿ ನಂಬಿಕೆ ಮುಖ್ಯ. ಆದರೆ, ಅನುಮಾನ ಬಂದಾಗ ಏನೆಲ್ಲಾ ನಡೆಯುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹೆಂಡತಿಯೊಬ್ಬಳು ಮಲಗಿದ್ದ ತನ್ನ ಗಂಡನ ಫೋನ್ ಅನ್ನು ಆತನ ಬೆರಳಚ್ಚು ಬಳಸಿ ಅನ್ಲಾಕ್ ಮಾಡಲು ಪ್ರಯತ್ನಿಸಿದ್ದಾಳೆ. ಆದರೆ, ಗಂಡ ತನ್ನ ಚಾಣಾಕ್ಷತನದಿಂದ ಆಕೆಯನ್ನು ಸೋಲಿಸಿದ್ದಾನೆ.
ಕೆರೊಲಿನಾ ಸೋಜಾ ಲಿಮಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸೋಜಾ ಮಲಗಿರುವಾಗ ಆತನ ಹೆಂಡತಿ ಫೋನ್ ತೆರೆಯಲು ಪ್ರಯತ್ನಿಸುತ್ತಾಳೆ. ಆದರೆ, ಸೋಜಾ ಮಲಗುವ ಮುನ್ನ ತನ್ನ ಫೋನ್ ಅನ್ನು ಕಾಲ್ಬೆರಳಿನಿಂದ ಲಾಕ್ ಮಾಡಿದ್ದರಿಂದ ಆಕೆಯ ಪ್ರಯತ್ನ ವಿಫಲವಾಗಿದೆ.
ಹೆಂಡತಿ ಅಭ್ಯಾಸವಾಗಿ ತನ್ನ ಫೋನ್ ಅನ್ನು ಪರಿಶೀಲಿಸುತ್ತಾಳೆ ಎಂಬುದು ಗಂಡನಿಗೆ ತಿಳಿದಿತ್ತು. ಹೀಗಾಗಿ, ಆತ ಈ ಚಾಣಾಕ್ಷತನದ ಉಪಾಯ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರು ಸೋಜಾ ಅವರ ಚಾಣಾಕ್ಷತನವನ್ನು ಹೊಗಳಿದ್ದಾರೆ.
View this post on Instagram