
ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ.
ರಾಧಾ (33) ಆತ್ಮಹತ್ಯೆಗೆ ಶರಣಾದ ಪತ್ನಿ. 8 ವರ್ಷಗಳ ಹಿಂದೆ ರಾಮಾಂಜಿನಯ್ಯ ಎಂಬುವವರನ್ನು ರಾಧಾ ವಿವಾಹವಾಗಿದ್ದರು. ಆದರೆ ಪತಿ ಮಹಾಶಯ ಬೇರೊಂದು ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಸಾಕಷ್ಟು ಬಾರಿ ಹೇಳಿದರೂ ಪತಿ ಅನೈತಿಕ ಸಂಬಂಧ ಬಿಟ್ಟಿರಲಿಲ್ಲ. ಇದರಿಂದ ಮನನೊಂದ ಪತ್ನಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡೊದ್ದಾರೆ.
ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.