
ಬೆಂಗಳೂರು: ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ ನೀಡದ ಪತಿಗೆ ಪತ್ನಿ ಚಾಕುವಿನಿಂದ ಇರಿದ ಘಟನೆ ಬೆಳ್ಳಂದೂರಿನ ಜುನ್ನಸಂದ್ರದಲ್ಲಿ ಫೆಬ್ರವರಿ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪಾರ್ಥ ಪ್ರತಿಮ್ ಅವರು ನೀಡಿದ ದೂರಿನ ಅನ್ವಯ ಪತ್ನಿ ರಿಯಾ ಘೋಷ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದ ರಿಯಾ ಪತಿ ಪಾರ್ಥ ಸರ್ಪ್ರೈಸ್ ಗಿಫ್ಟ್ ತರಬಹುದು ಎಂದು ಕಾದಿದ್ದರು. ಆದರೆ, ತಾತಾ ಮರಣ ಹೊಂದಿದ್ದರಿಂದ ಮತ್ತು ಕೆಲಸದ ಒತ್ತಡದ ಕಾರಣ ಅವರು ಉಡುಗೊರೆ ತರುವುದನ್ನು ಮರೆತಿದ್ದಾರೆ. ಆಯಾಸವಾಗಿದ್ದರಿಂದ ಮನೆಗೆ ಬಂದ ಕೂಡಲೇ ಹೋಗಿ ರೆಸ್ಟ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ರಿಯಾ ಪತಿ ಮೇಲೆ ಕೋಪಗೊಂಡು ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.