
ಹೈದರಾಬಾದ್: ಪತ್ನಿ ಹಾಗೂ ಮಗನಿಂದಲೇ ವೈದ್ಯರೊಬ್ಬರು ಕೊಲೆಯಾಗಿರುವ ಘಟನೆ ಹೈದರಾಬಾದ್ ನ ಬಂಡಗುಡದಲ್ಲಿ ನಡೆದಿದೆ.
ಡಾ.ಮಸಿಯುದ್ದೀನ್ ಕೊಲೆಯಾದ ದುರ್ದೈವಿ. ಕ್ರಿಸ್ಟಕ್ ಕಾಲೋನಿಯಲ್ಲಿ ಪತ್ನಿ ಶಬಾನಾ ಹಾಗೂ ಮಗ ಸಮೀರ್ ಜೊತೆ ವಾಸವಾಗಿದ್ದರು. ಕುಟುಂಬ ಸದಸ್ಯರ ನಡುವೆ ವಗ್ವಾದ ನಡೆದು ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಪತ್ನಿ ಶಬಾನಾ ಹಾಗೂ ಮಗ ಸಮೀರ್ ವೈದ್ಯ ಮುಸಿಯುದ್ದೀನ್ ಅವರ ಕೈ-ಕಾಲು ಕಟ್ಟಿಹಾಕಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಂಡ್ಲಗುಡ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.