
ಜಾತಕದಲ್ಲಿ ದೋಷವಿರುವವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಉಪಾಯಗಳನ್ನು ಅನುಸರಿಸಬೇಕು. ಪುರುಷನ ಯಶಸ್ಸಿನ ಹಿಂದೆ ಮಹಿಳೆಯಿರುತ್ತಾಳೆ ಎನ್ನುವಂತೆ ಪತ್ನಿ ಮಾಡುವ ಕೆಲಸಗಳು ಪತಿಯ ಅದೃಷ್ಟವನ್ನು ಬದಲಿಸುವ ಶಕ್ತಿ ಹೊಂದಿದೆ.
ಇಬ್ಬರಲ್ಲಿ ಒಬ್ಬರು ತಪ್ಪು ಮಾಡಿದ್ರೂ ಅದ್ರ ಫಲವನ್ನು ಇಬ್ಬರೂ ಅನುಭವಿಸಬೇಕಾಗುತ್ತದೆ. ಹಾಗೆ ಇಬ್ಬರೂ ಶುಭ ಕೆಲಸ ಮಾಡಿದ್ರೆ ಇಬ್ಬರಿಗೂ ಪ್ರಯೋಜನವಾಗಲಿದೆ.
ವಿವಾಹಿತೆ ಬೆಳಿಗ್ಗೆ ಬೇಗ ಏಳಬೇಕು. ಸ್ನಾನ ಮಾಡಿ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸಬೇಕು. ಇದಾದ ನಂತ್ರ ಗುಲಾಬಿ ಹೂವಿನ ಜೊತೆ ಕುಂಕುಮ, ಅಕ್ಷತೆಯನ್ನು ತುಳಸಿಗೆ ಹಾಕಬೇಕು. ಪತಿಯ ಕಷ್ಟ ನಿವಾರಣೆಗೆ ಪ್ರಾರ್ಥನೆ ಮಾಡಿ. ಪ್ರತಿ ದಿನ ಈ ಕೆಲಸವನ್ನು ತಪ್ಪದೆ ಮಾಡುತ್ತ ಬಂದಲ್ಲಿ ಶುಭ ಫಲ ಪ್ರಾಪ್ತಿಯಾಗಲಿದೆ.
ಶನಿವಾರ ಸಾಸಿವೆ ಎಣ್ಣೆಯಲ್ಲಿ ಸಿಹಿ ತಿಂಡಿ ತಯಾರಿಸಬೇಕು. ಇದನ್ನು ಬಡವರಿಗೆ ನೀಡಬೇಕು. ಶನಿ ದೋಷವನ್ನು ಇದು ಕಡಿಮೆ ಮಾಡುತ್ತದೆ.
ಅರ್ಧ ಕೊಬ್ಬರಿಗೆ ಸಕ್ಕರೆ ಹಾಕಿ ಅಶ್ವತ್ಥ ಮರದ ಕೆಳಗೆ ಇಡಬೇಕು. ವೈವಾಹಿಕ ಜೀವನ ಸುಖವಾಗಿರಲು ಇದು ನೆರವಾಗುತ್ತದೆ.
ಪ್ರತಿ ದಿನ ಶಿವನ ಜೊತೆ ಪಾರ್ವತಿ ಪೂಜೆಯನ್ನೂ ಮಾಡಿ. ಪಾರ್ವತಿಗೆ ಕುಂಕುಮವನ್ನು ಅರ್ಪಿಸಿ. ಸೌಭಾಗ್ಯವನ್ನು ಹೆಚ್ಚಿಸುತ್ತದೆ.
ಕಾಲ ಕಾಲಕ್ಕೆ ಮಂಗಳಮುಖಿಯರಿಗೆ ಹಣವನ್ನು ದಾನ ಮಾಡಿ. ಅವ್ರ ಆಶೀರ್ವಾದ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ.