ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣು ಇರ್ತಾಳೆ ಅನ್ನೋದು ಲೋಕಾರೂಢಿ ಮಾತು. ಈಗ ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸೋದ್ರಲ್ಲೂ ಹೆಣ್ಣಿನ ಪಾತ್ರ ಇದೆ ಅನ್ನೋದು ಸಾಬೀತಾಗಿದೆ. ಅದು ಅದೃಷ್ಟ ಕಣ್ರೀ, ಯಾವ ಕ್ಷಣದಲ್ಲೂ ಬೇಕಾದ್ರೂ ಖುಲಾಯಿಸಿ ಬಿಡುತ್ತೆ. ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿ ಮಾತು ಕೇಳಿ ಕೋಟ್ಯಾಧಿಪತಿಯಾಗಿದ್ದಾನೆ.
ಅಮೆರಿಕಾದ ಮಿಚಿಗನ್ ನಿವಾಸಿಯಾಗಿರುವ ಪ್ರೆಸ್ಟನ್ ಮಾಕಿ ಎನ್ನುವ ವ್ಯಕ್ತಿ, ಎಂದಿನಂತೆ ತಮ್ಮ ಕೆಲಸವನ್ನ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಅದೇ ವೇಳೆ ಅವರ ಪತ್ನಿ ಅವರಿಗೆ ಮೆಸೇಜ್ ಮಾಡಿ ಮನೆಗೆ ಬರುವಾಗ ಅಂಗಡಿಗೆ ಹೋಗಿ ಕೆಲ ಸಾಮಗ್ರಿಗಳನ್ನ ತರುವುದಕ್ಕೆ ಹೇಳಿದ್ದಾಳೆ.
ಕೊನೆಗೆ ಆತ ದಾರಿ ಮಧ್ಯದಲ್ಲೇ ಇರುವ ಅಂಗಡಿಗೆ ಹೋಗಿ, ಹೆಂಡತಿ ಹೇಳಿರುವ ವಸ್ತುಗಳನ್ನ ಖರೀದಿ ಮಾಡಿದ್ದಾರೆ. ಆಗಲೇ ನೋಡಿ ಅವರ ಅದೃಷ್ಟ ಬದಲಾಗಿದ್ದು. ಪ್ರೆಸ್ಟ್ನ್ ಮಾಕಿ 5 ಲಾಟರಿ ಟಿಕೆಟ್ ಖರೀದಿ ಮಾಡಿದ್ದಾರೆ. ಮರುದಿನ ಲಾಟರಿ ನಂಬರ್ನ್ನ ಮೊಬೈಲ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ನೋಡಿದ್ದಾರೆ. 05-12-16-17-29 ನಂಬರ್ವುಳ್ಳ ಲಾಟರಿಯನ್ನ ಅವರು ಗೆದ್ದಿರುವುದು ಕನ್ಫರ್ಮ್ ಆಗಿರುತ್ತೆ. ಅವರು ಲಾಟರಿ ಮೂಲಕ ಬರೋಬ್ಬರಿ $190,736 ಅಂದರೆ ಒಂದು ಕೋಟಿ 55 ಲಕ್ಷ 79 ಸಾವಿರದ 381 ರೂಪಾಯಿ ಗೆದ್ದಿರುವುದು ಗೊತ್ತಾಗುತ್ತೆ.
ನಾನು ಸಾಮಾನ್ಯವಾಗಿ $ 222,000 ಕ್ಕಿಂತ ಹೆಚ್ಚಿಲ್ಲದಿದ್ದರೆ ಲಾಟರಿಯನ್ನ ಖರೀದಿ ಮಾಡುವುದಿಲ್ಲ. ಈ ಲಾಟರಿಯ ಹಣ, ದೊಡ್ಡ ಮೊತ್ತಕ್ಕೆ ಹತ್ತಿರವಾಗಿದ್ದರಿಂದ ನಾನು ಖರೀದಿ ಮಾಡಿದ್ದೆ. ಈಗ ಬಂದಿರುವ ಹಣದಿಂದ ಸ್ವಲ್ಪ ಹಣವನ್ನ ಹೂಡಿಕೆ ಮಾಡುತ್ತೇನೆ. ಇನ್ನೂ ಸ್ವಲ್ಪ ಹಣವನ್ನ ಕುಟುಂಬಕ್ಕಾಗಿ ಖರ್ಚು ಮಾಡುತ್ತೇನೆ ಎಂದು ಹೇಳುತ್ತಾರೆ ಪ್ರೆಸ್ಟೆನ್ ಮಾಕಿ. ಅಷ್ಟೆ ಅಲ್ಲ ಈ ಬಂಪರ್ ಲಾಟರಿ ಹೊಡೆಯುವುದಕ್ಕೆ ಕಾರಣ ಹೆಂಡತಿ ಎಂದು ಹೇಳುವುದಕ್ಕೆ ಮಾತ್ರ ಅವರು ಮರೆಯುವುದಿಲ್ಲ.