ಮಹಿಳೆಯೊಬ್ಬಳು ತನ್ನ ಗಂಡನ ಖಾಸಗಿ ಅಂಗಕ್ಕೆ ಬಿಸಿ ಎಣ್ಣೆಯನ್ನು ಸುರಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಹಿಳೆಯೊಬ್ಬಳು ತನ್ನ ಗಂಡನ ಜನನಾಂಗದ ಮೇಲೆ ಕುದಿಯುವ ಎಣ್ಣೆಯನ್ನು ಎಸೆದ ನಂತರ ಪರಾರಿಯಾಗಿದ್ದಾಳೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. 32 ವರ್ಷದ ಸುನಿಲ್ ಧಾಕಾಡ್ ಮೇಲೆ ಪತ್ನಿ ಭಾವನಾ ಎಣ್ಣೆ ಎರಚಿದ್ದಾಳೆ. ತನ್ನ ಪತ್ನಿ ಮೊಬೈಲ್ ಫೋನ್ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುಕ್ಕೆ ವಿರೋಧ ವ್ಯಕ್ತಪಡಿಸಿದ ಗಂಡನ ಮೇಲೆ ಪತ್ನಿ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಬೇರೆಯೊಬ್ಬ ವ್ಯಕ್ತಿಯ ಜೊತೆ ಹೆಂಡತಿ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಕೆರಳಿದ ಗಂಡ ಸುನಿಲ್ ಭಾವನಾ ಅವರ ಫೋನ್ ಕಸಿದುಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಪತ್ನಿ ಪತಿ ಮಲಗಿದ್ದಾಗ ಗಂಡನ ಮರ್ಮಾಂಗದ ಮೇಲೆ ಬಿಸಿ ಎಣ್ಣೆ ಎರಚಿದ್ದಾಳೆ. ಸದ್ಯ. ಸುನಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಈಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.