ಮಧ್ಯಪ್ರದೇಶದ ಇಂದೋರ್ ನಲ್ಲಿ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಶ್ರೀಮಂತ ವ್ಯಕ್ತಿಯ ಪತ್ನಿಯೊಬ್ಬಳು 13 ವರ್ಷ ಚಿಕ್ಕವನಾದ ಆಟೋ ರಿಕ್ಷಾ ಚಾಲಕನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆ 47 ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದಾಳೆ.
ವರದಿಯ ಪ್ರಕಾರ, ಇಂದೋರ್ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪತ್ನಿ ನಾಪತ್ತೆಯಾಗಿದ್ದಾಳೆ. ಆಕೆ ಮನೆಯಲ್ಲಿದ್ದ 47 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಹೋಗಿದ್ದಾಳೆಂದು ಪತಿ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಸುಲಭವಾಗಿ ಮಾಡಬಹುದಾದ ‘ಕ್ಯಾಪ್ಸಿಕಂ ಮಸಾಲ’
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತ್ನಿ ಹಾಗೂ ಆಟೋ ಚಾಲಕನ ಪತ್ತೆ ಶುರು ಮಾಡಿದ್ದಾರೆ. ಮಾಹಿತಿಯ ಪ್ರಕಾರ, ಆಟೋ ಚಾಲಕ, ಆಗಾಗ್ಗೆ ಮಹಿಳೆಯನ್ನು ಮನೆಗೆ ಬಿಡುತ್ತಿದ್ದ ಎನ್ನಲಾಗಿದೆ.
ಮಹಿಳೆ ಅಕ್ಟೋಬರ್ 13 ರಿಂದ ನಾಪತ್ತೆಯಾಗಿದ್ದಾಳೆ. ರಾತ್ರಿಯಾದ್ರೂ ಪತ್ನಿ ಮನೆಗೆ ಬರಲಿಲ್ಲ. ನಂತ್ರ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.
ಮಹಿಳೆಯ ಪತಿ ಕೋಟ್ಯಾಧಿಪತಿ. ಆತನ ಬಳಿ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯಿದೆ. ಮನೆಯ ಕಪಾಟಿನಲ್ಲಿದ್ದ 47 ಲಕ್ಷ ರೂಪಾಯಿಯನ್ನು ಆಕೆ ತೆಗೆದುಕೊಂಡು ಹೋಗಿದ್ದಾಳೆಂದು ಪತಿ ಆರೋಪ ಮಾಡಿದ್ದಾನೆ. ಮಹಿಳೆ ಜೊತೆ ಪರಾರಿಯಾದ ಆಟೋ ಚಾಲಕನ ಹೆಸರು ಇಮ್ರಾನ್. ಆತನ ವಯಸ್ಸು 32. ಆತನ ಸ್ನೇಹಿತನ ಮನೆಯಲ್ಲಿದ್ದ 33 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.