
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿದ್ದಾಳೆ.
ನವೀನ್ ಮೃತಪಟ್ಟ ವ್ಯಕ್ತಿ: ಚಿಕ್ಕಮಗಳೂರು ಜಿಲ್ಲೆ ಹನುಮನಹಳ್ಳಿ ನಿವಾಸಿ ನವೀನ್ ಗೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ ಪತ್ನಿ ಪಾವನಾ ಕೊಲೆ ಮಾಡಿದ್ದಾಳೆ. ಆಗಸ್ಟ್ 6 ರಂದು ಯಗಟಿ ಕೆರೆ ಸಮೀಪ ನವೀನ್ ಮೃತದೇಹ ಪತ್ತೆಯಾಗಿತ್ತು.
ಇದು ಸಹಜ ಸಾವಲ್ಲ, ನವೀನ್ ನನ್ನು ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ನವೀನ್ ಪೋಷಕರು ಯಗಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ತನಿಖೆಯಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಿಯಕರ ಸಂಜಯ್ ಜೊತೆ ಸೇರಿ ಪಾವನಾ ತನ್ನ ಗಂಡ ನವೀನ್ ಗೆ ನಿದ್ದರೆ ಮಾತತ್ರೆ ಕೊಟ್ಟು ಕೊಲೆ ಮಾಡಿದ್ದಾಳೆ. ನಂತರ ಬೈಕ್ ನಲ್ಲಿ ಶವ ತಂದು ಕೆರೆಗೆ ಎಸೆದಿದ್ದಾರೆ. ಆರೋಪಿಗಳಾದ ಪಾವನಾ ಸಂಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಡೂರು ತಾಲೂಕಿನ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.