ಬೆಂಗಳೂರು: ಸುತ್ತಿಗೆಯಿಂದ ಹೊಡೆದು ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಅತ್ತಿಬೆಲೆ ಸಮೀಪದ ಶುಭ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಬಿಹಾರ ಮೂಲದ ಮಲ್ಲಿಕಾ ಖಾತೂನ್ (35) ಕೊಲೆಯಾದ ಮಹಿಳೆ. ಪತಿ ಮೊಹಮ್ಮದ್ ಸೈಯ್ಯದ್ ಪತ್ನಿಯನ್ನೇ ಕೊಂದ ಪತಿ. ಪತ್ನಿ ಶೀಲ ಶಂಕಿಸಿ ಪತಿ ಮೊಹಮ್ಮದ್ ಸೈಯ್ಯದ್ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇಂದು ಬೆಳಿಗ್ಗೆ ಕೂಡ ಪತ್ನೀ ಶೀಲ ಶಂಕಿಸಿ ಪತಿ ಮೊಹಮ್ಮದ್ ಜಗಳ ಮಾಡಿದ್ದಾನೆ. ದಂಪತಿ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಪತ್ನಿಯನ್ನೇ ಕೊಲೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.