
ಕೊಪ್ಪಳ: ಪತಿಮಹಾಶಯನೊಬ್ಬ ಪತ್ನಿಯನ್ನು ಕೊಲೆಗೈದು, ಬಳಿಕ ಆಕೆಯ ಶವವನ್ನು ಸುಟ್ಟುಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯ ಕಕನೂರು ತಾಲೂಕಿನ ಆರಕೇರಿ ಗ್ರಾಮದಲ್ಲಿ ನಡೆದಿದೆ.
30 ವರ್ಷದ ಗೀತಾ ಬಾವಿಕಟ್ಟಿ ಕೊಲೆಯಾಗಿರುವ ಮಹಿಳೆ. ದೇವರೆಡ್ಡಪ್ಪ ಬಾವಿಕಟ್ಟಿ ಪತ್ನಿಯನ್ನೇ ಕೊಂದ ಪತಿ. ಪತಿ ಮೇಲೆ ಸದಾ ಸಂಶಯಪಡುತ್ತಿದ್ದ ದೇವರೆಡ್ಡಪ್ಪ, ಆಕೆ ಮಲಗಿದ್ದ ವೇಳೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಬಳಿಕ ತನ್ನ ತಂದೆ ಮಲ್ಲಾರೆಡ್ಡಪ್ಪ ಜೊತೆಸೇರಿ ಪತ್ನಿ ಶವವನ್ನು ಸುಟ್ಟು ಹಾಕಿದ್ದಾನೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.