
ಪೋರ್ನ್ ವೀಕ್ಷಣೆ ಮತ್ತು ಹಸ್ತಮೈಥುನ ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯರ ಲೈಂಗಿಕ ಸ್ವಾಯತ್ತತೆ ಮತ್ತು ಖಾಸಗಿತನಕ್ಕೆ ನ್ಯಾಯಾಲಯ ಮನ್ನಣೆ ನೀಡಿದೆ.
ಪತಿ ತನ್ನ ಪತ್ನಿ ಪೋರ್ನ್ ವೀಕ್ಷಣೆ ಮತ್ತು ಹಸ್ತಮೈಥುನದಲ್ಲಿ ತೊಡಗುತ್ತಾಳೆ ಎಂದು ಆರೋಪಿಸಿ ವಿಚ್ಛೇದನ ಕೋರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಪೋರ್ನ್ ವೀಕ್ಷಣೆ ಮತ್ತು ಹಸ್ತಮೈಥುನ ವಿಚ್ಛೇದನಕ್ಕೆ ಸೂಕ್ತ ಕಾರಣವಲ್ಲ ಎಂದು ತಿಳಿಸಿದೆ.
ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಆರ್. ಪೂರ್ಣಿಮಾ ಅವರಿದ್ದ ಮಧುರೈ ಪೀಠ, ಪೋರ್ನ್ ವೀಕ್ಷಣೆ ಮತ್ತು ಹಸ್ತಮೈಥುನ ಕಾನೂನು ಬಾಹಿರವಲ್ಲ. ಅಲ್ಲದೆ, ಇದರಿಂದ ದಾಂಪತ್ಯ ಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದ್ದರಿಂದ ಇದು ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿದೆ.
ಮಹಿಳೆಯರು ಹಸ್ತಮೈಥುನದಲ್ಲಿ ತೊಡಗಿದರೆ ಅದನ್ನು ನಿಂದಿಸುವುದು ಸರಿಯಲ್ಲ. ಪುರುಷರು ಹಸ್ತಮೈಥುನದಲ್ಲಿ ತೊಡಗುವುದು ಸಾಮಾನ್ಯವಾದರೆ, ಮಹಿಳೆಯರು ತೊಡಗುವುದರಲ್ಲಿ ತಪ್ಪೇನಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಮದುವೆಯ ನಂತರವೂ ಮಹಿಳೆಗೆ ವೈಯಕ್ತಿಕ ಸ್ವಾತಂತ್ರ್ಯವಿರುತ್ತದೆ. ಆಕೆಯ ಲೈಂಗಿಕ ಸ್ವಾಯತ್ತತೆಯನ್ನು ಗೌರವಿಸಬೇಕು. ವಿಚ್ಛೇದನಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಮಾತ್ರ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.