
ವಿಜಯಪುರ: ಪತ್ನಿ ಶೀಲ ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹುಬನೂರು ತಾಂಡಾ -2ರಲ್ಲಿ ನಡೆದಿದೆ.
25 ವರ್ಷದ ರೇಷ್ಮಾ ರಾಥೋಡ್ ಕೊಲೆಯಾದ ಮಹಿಳೆ. ಆರೋಪಿ ಪತಿ ಅಶೋಕ್ ರಾಥೋಡ್(33) ಪತ್ನಿಯೊಂದಿಗೆ ಜಗಳವಾಡಿ ಸನಿಕೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. 11 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಮೂವರು ಮಕ್ಕಳಾಗಿದ್ದಾರೆ. ಇತ್ತೀಚಿಗೆ ಕುಡಿತದ ಚಟಕ್ಕೆ ಬಿದ್ದಿದ್ದ ಅಶೋಕ್ ಪತ್ನಿ ಶೀಲ ಶಂಕಿಸಿ ಜಗಳವಾಡುತ್ತಿದ್ದ. ಅನೈತಿಕ ಸಂಬಂಧ ಹೊಂದಿರುವುದಾಗಿ ಸಂಶಯಪಡುತ್ತಿದ್ದ ಅಶೋಕ್ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದ.
ಪತಿಯ ಕಾಟ ತಾಳದೆ ಹುಬನೂರಿನಲ್ಲಿದ್ದ ತವರು ಮನೆಗೆ ರೇಷ್ಮಾ ಬಂದಿದ್ದಳು. ಅಲ್ಲಿಗೆ ಕುಡಿದು ಬಂದು ಗಲಾಟೆ ಮಾಡಿದ ಅಶೋಕ್ ಹೊಡೆದು ಕೊಲೆ ಮಾಡಿದ್ದಾನೆ.