
ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ವೈರ್ ನಿಂದ ಕುತ್ತಿಗೆ ಬಿಗಿದು ಪತಿ ಕೊಲೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಶಾಂತಿನಗರದಲ್ಲಿ ನಡೆದಿದೆ.
ಕೋಕಿಲಾ(25) ಅವರನ್ನು ಕೊಲೆ ಮಾಡಲಾಗಿದೆ. ಪತ್ನಿಯನ್ನು ಕೊಲೆ ಮಾಡಿ ಪ್ರತಿ ಸಿದ್ಧರಾಮಣ್ಣ(35) ಪರಾರಿಯಾಗಿದ್ದಾನೆ. ತಂದೆ ಮಗಳ ಮನೆಗೆ ಬಂದಾಗ ಕೊಲೆ ಪ್ರಕರಣ ಬಹಿರಂಗವಾಗಿದೆ. ಕೊಲೆ ಆರೋಪಿ ಸಿದ್ದರಾಮಣ್ಣನಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.